ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಮೂವರು RT ಸ್ಟ್ರೀಟ್​ನಲ್ಲಿ ಅರೆಸ್ಟ್, 65 ಲಕ್ಷ ಹಣ ವಶ

| Updated By: ಸಾಧು ಶ್ರೀನಾಥ್​

Updated on: Sep 03, 2020 | 1:37 PM

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಹಣವನ್ನು ಸಿಟಿ ಮಾರ್ಕೆಟ್​ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಹಾಗೂ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ದಸ್ತಗಿರ್, ಕಿರಣ್‌ಕುಮಾರ್, ಮಸ್ತಾನ್ ಬಂಧಿತ ಆರೋಪಿಗಳು. ಆಂಧ್ರ ನೋಂದಣಿಯುಳ್ಳ ಎರ್ಟಿಗಾ ಕಾರಿನಲ್ಲಿ ಆರ್.ಟಿ. ಸ್ಟ್ರೀಟ್​ನ ರಂಗಸ್ವಾಮಿ ದೇವಸ್ಥಾನದ ಬಳಿ ಬಂದಿದ್ದ ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡ್ತಿದ್ರು. ಇದನ್ನು ಗಮನಿಸಿ ಬೀಟ್​ನಲ್ಲಿದ್ದ ಸಿಟಿ ಮಾರ್ಕೆಟ್ ಪೊಲೀಸರು ವಿಚಾರಿಸಿದ್ರು. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಬ್ಬಿಬ್ಬಾಗಿದ್ದಾರೆ. ಪೊಲೀಸರಿಗೆ ಅನುಮಾನ ಬಂದು ಕಾರಿನ ಡಿಕ್ಕಿ ತೆಗೆಸಿ ನೋಡಿದಾಗ […]

ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಮೂವರು RT ಸ್ಟ್ರೀಟ್​ನಲ್ಲಿ ಅರೆಸ್ಟ್, 65 ಲಕ್ಷ ಹಣ ವಶ
Follow us on

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಹಣವನ್ನು ಸಿಟಿ ಮಾರ್ಕೆಟ್​ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಹಾಗೂ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ದಸ್ತಗಿರ್, ಕಿರಣ್‌ಕುಮಾರ್, ಮಸ್ತಾನ್ ಬಂಧಿತ ಆರೋಪಿಗಳು.

ಆಂಧ್ರ ನೋಂದಣಿಯುಳ್ಳ ಎರ್ಟಿಗಾ ಕಾರಿನಲ್ಲಿ ಆರ್.ಟಿ. ಸ್ಟ್ರೀಟ್​ನ ರಂಗಸ್ವಾಮಿ ದೇವಸ್ಥಾನದ ಬಳಿ ಬಂದಿದ್ದ ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡ್ತಿದ್ರು. ಇದನ್ನು ಗಮನಿಸಿ ಬೀಟ್​ನಲ್ಲಿದ್ದ ಸಿಟಿ ಮಾರ್ಕೆಟ್ ಪೊಲೀಸರು ವಿಚಾರಿಸಿದ್ರು. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಬ್ಬಿಬ್ಬಾಗಿದ್ದಾರೆ.

ಪೊಲೀಸರಿಗೆ ಅನುಮಾನ ಬಂದು ಕಾರಿನ ಡಿಕ್ಕಿ ತೆಗೆಸಿ ನೋಡಿದಾಗ ಹಣವಿದ್ದ ಬ್ಯಾಗ್​ ಪತ್ತೆಯಾಗಿದೆ. ಬ್ಯಾಗ್​ನಲ್ಲಿ 20 ಲಕ್ಷ ಹಣವಿದೆ ಎಂದು ಆರೋಪಿಗಳು ಹೇಳಿದ್ರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಪಿಐ ಕುಮಾರಸ್ವಾಮಿ, ಬ್ಯಾಗ್ ಪರಿಶೀಲನೆ ವೇಳೆ 65 ಲಕ್ಷ ಹಣವಿರುವುದು ಪತ್ತೆಯಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ 65 ಲಕ್ಷ ಹಣ ಜಪ್ತಿ ಮಾಡಿದ್ದಾರೆ.