ದಾರಿ ಬಿಟ್ಟು ನಿಲ್ಲಲು ಹೇಳಿದ್ದಕ್ಕೆ ಯುವಕನ ಮೇಲೆ ಭೀಕರ ಹಲ್ಲೆ, ಎಲ್ಲಿ?
ವಿಜಯಪುರ: ದಾರಿ ಬಿಟ್ಟು ನಿಲ್ಲಬೇಕೆಂದು ಹೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸಿಂಪೀರ ದರ್ಗಾ ಬಳಿ ನಡೆದಿದೆ. ಶಾಹೀದ್ ಬೇಪಾರಿ (35 ) ಹಲ್ಲೆಗೊಳಗಾದ ಯುವಕ. ನಿನ್ನೆ ತಡರಾತ್ರಿ ಸಿದ್ದು, ನಾಗು, ಮಲಕಪ್ಪ ಎಂಬ ಮೂವರು ಸಹೋದರರು ಸೇರಿ ಓರ್ವನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಇಟ್ಟಿಗೆ, ಕಬ್ಬಿಣದ ರಾಡ್, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ರಸ್ತೆ ಮೇಲೆ ನಿಂತಿದ್ದ ಸಿದ್ದು ಹಾಗೂ ಸಹೋದರಿಗೆ ದಾರಿ ಬಿಟ್ಟು ನಿಲ್ಲಲು ಹೇಳಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ. ಹಲ್ಲೆಗೊಳಗಾದ ಶಾಹೀದ್ನನ್ನು […]

ವಿಜಯಪುರ: ದಾರಿ ಬಿಟ್ಟು ನಿಲ್ಲಬೇಕೆಂದು ಹೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸಿಂಪೀರ ದರ್ಗಾ ಬಳಿ ನಡೆದಿದೆ. ಶಾಹೀದ್ ಬೇಪಾರಿ (35 ) ಹಲ್ಲೆಗೊಳಗಾದ ಯುವಕ.
ನಿನ್ನೆ ತಡರಾತ್ರಿ ಸಿದ್ದು, ನಾಗು, ಮಲಕಪ್ಪ ಎಂಬ ಮೂವರು ಸಹೋದರರು ಸೇರಿ ಓರ್ವನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಇಟ್ಟಿಗೆ, ಕಬ್ಬಿಣದ ರಾಡ್, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ರಸ್ತೆ ಮೇಲೆ ನಿಂತಿದ್ದ ಸಿದ್ದು ಹಾಗೂ ಸಹೋದರಿಗೆ ದಾರಿ ಬಿಟ್ಟು ನಿಲ್ಲಲು ಹೇಳಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ.
ಹಲ್ಲೆಗೊಳಗಾದ ಶಾಹೀದ್ನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 2:49 pm, Tue, 6 October 20




