ಡಿಕೆಶಿ ಮೇಲಿನ CBI ದಾಳಿ: ಜನಾರ್ದನ ರೆಡ್ಡಿ ಮೇಲೆ ನಡೆದಿದ್ದ ರೇಡ್ ನೆನಪಿಸಿಕೊಂಡ ಸಚಿವ ಅಶೋಕ್
ಬೆಂಗಳೂರು: ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದಾರೆ. 2017-18ರಲ್ಲಿನ ಪ್ರಕರಣಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಅಂತಾ ಅಶೋಕ್ ಹೇಳಿದ್ದಾರೆ. 50 ಕೋಟಿ ತಂದು RSSನವರು ಖರ್ಚು ಮಾಡುತ್ತಿದ್ದಾರೆ ಎಂದು ನಿನ್ನೆ ಶಿರಾದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತಾಡಬಾರದು. RSS ಒಂದು […]

ಬೆಂಗಳೂರು: ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದಾರೆ. 2017-18ರಲ್ಲಿನ ಪ್ರಕರಣಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಅಂತಾ ಅಶೋಕ್ ಹೇಳಿದ್ದಾರೆ.
50 ಕೋಟಿ ತಂದು RSSನವರು ಖರ್ಚು ಮಾಡುತ್ತಿದ್ದಾರೆ ಎಂದು ನಿನ್ನೆ ಶಿರಾದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತಾಡಬಾರದು. RSS ಒಂದು ಸ್ವಾಯತ್ತ ಸಂಸ್ಥೆ, ಅವರು ರಾಜಕೀಯಕ್ಕೆ ಬರಲ್ಲ ಎಂದು ಅಶೋಕ್ ಹೇಳಿದ್ದಾರೆ.
ಸಿಬಿಐ ಸ್ವತಂತ್ರ ಸಂಸ್ಥೆ. 2017-18 ರಲ್ಲಿ ದಾಖಲಾದ ಕೇಸ್ಗಳು ಈಗ ಮುಂದುವರೆದಿವೆ ಅಷ್ಟೇ. ಹಿಂದೆ ಕೂಡ ಜನಾರ್ದನ ರೆಡ್ಡಿ ಮೇಲೆ ಸಿಬಿಐ ದಾಳಿ ಆದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಹಾಗಾದರೆ ಅದನ್ನು ಕಾಂಗ್ರೆಸ್ ನವರು ಮಾಡಿದ್ದು ಎಂದು ಒಪ್ಪಿಕೊಳ್ತಾರಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
Published On - 1:59 pm, Tue, 6 October 20