‘ನಾವು ಡಿಕೆ ಶಿವಕುಮಾರ್ ಮನೆಯಲ್ಲಿ ಯಾರ ಮೇಲೂ ಹಲ್ಲೆ ಮಾಡಿಲ್ಲ’
ಬೆಂಗಳೂರು: ಡಿಕೆಶಿ ಮನೆ ಮೇಲೆ ನಿನ್ನೆ ಸಿಬಿಐ ದಾಳಿ ವೇಳೆ.. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟರು, ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಂಜಾವಧೂತ ಶ್ರೀ ಜೊತೆ ಚರ್ಚೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೊಂಡಿದ್ದರು. ಆದರೆ ಡಿಕೆಶಿ ಹೇಳಿಕೆಯನ್ನು ಸಿಬಿಐ ತಳ್ಳಿ ಹಾಕಿದೆ. ನಾವು ಡಿಕೆಶಿ ಮನೆಯಲ್ಲಿ ಯಾರಿಗೂ ಹಲ್ಲೆ ಮಾಡಿಲ್ಲ. ಅಂತಹ ಪರಿಸ್ಥಿತಿಯೇ ನಿರ್ಮಾಣವಾಗಿಲ್ಲ. ಡಿಕೆಶಿ ಹಾಗೂ ಕುಟುಂಬದವರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಟಿವಿ9ಗೆ ಸಿಬಿಐ […]

ಬೆಂಗಳೂರು: ಡಿಕೆಶಿ ಮನೆ ಮೇಲೆ ನಿನ್ನೆ ಸಿಬಿಐ ದಾಳಿ ವೇಳೆ.. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟರು, ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಂಜಾವಧೂತ ಶ್ರೀ ಜೊತೆ ಚರ್ಚೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೊಂಡಿದ್ದರು.
ಆದರೆ ಡಿಕೆಶಿ ಹೇಳಿಕೆಯನ್ನು ಸಿಬಿಐ ತಳ್ಳಿ ಹಾಕಿದೆ. ನಾವು ಡಿಕೆಶಿ ಮನೆಯಲ್ಲಿ ಯಾರಿಗೂ ಹಲ್ಲೆ ಮಾಡಿಲ್ಲ. ಅಂತಹ ಪರಿಸ್ಥಿತಿಯೇ ನಿರ್ಮಾಣವಾಗಿಲ್ಲ. ಡಿಕೆಶಿ ಹಾಗೂ ಕುಟುಂಬದವರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಟಿವಿ9ಗೆ ಸಿಬಿಐ ಉನ್ನತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.
ಹಾಗಿದ್ರೆ ಡಿಕೆಶಿ ಇಂತಹ ಹೇಳಿಕೆ ಕೊಟ್ಟಿದ್ದು ಯಾಕೆ? ಅನುಕಂಪಗಿಟ್ಟಿಸಲು ಈ ರೀತಿ ಹೇಳಿಕೆ ನಾ? ಉಪ ಚುನಾವಣೆ ಇರುವ ಕಾರಣ ಇಂತಹ ಹೇಳಿಕೆ ಕೊಟ್ರಾ? ಎಂಬ ಪ್ರಶ್ನೆ ಕಾಡುತ್ತಿದೆ. ಹಲ್ಲೆ ಮಾಡಿದ್ದಾರೆಂದು ಡಿಕೆ ಶಿವಕುಮಾರ್ ಹೇಳಿದ್ರೆ.. ಸಿಬಿಐ ಯಾವುದೇ ಹಲ್ಲೆ ಮಾಡಿಲ್ಲ ಎಂದು ಹೇಳುತ್ತಿದೆ.
ಇದನ್ನೂ ಓದಿ: ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ
Published On - 1:04 pm, Tue, 6 October 20