ಮತ್ತೊರ್ವ ಕೈ ನಾಯಕನಿಗೆ CBI ಕಂಟಕ: ಬಿಜೆಪಿ ಸೇರುತ್ತಾರಾ ಅವರು..?
ಬೆಂಗಳೂರು: ಸಿಬಿಐ ಅಧಿಕಾರಿಗಳು ಭರ್ಜರಿ ಬೇಟೆಗೆ ಇಳಿದಿದ್ದಾರೆ. ಈಗಾಗಲೇ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಿನ್ನೆ CBI ಅಧಿಕಾರಿಗಳು ದಾಳಿ ನಡೆಸಿದ್ರು. ಈಗ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಸಿಬಿಐ ಕಂಟಕ ಎದುರಾಗಿದೆ. ಸಿಬಿಐ ತನಿಖೆಗೆ ಹೆದರಿ ಬಿಜೆಪಿ ಸೇರ್ತಾರಾ ಮಾಜಿ ಸಚಿವ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಕೆಳದ ಎರಡು ದಿನಗಳಿಂದ ಯೋಗಿಶ್ ಗೌಡ ದೆಹಲಿಯಲ್ಲಿದ್ದಾರೆ. ಇನ್ನು ತನಿಖೆಯಿಂದ ಪಾರಾಗಲು ವಿನಯ್ ಕುಲಕರ್ಣಿ ಬಿಜೆಪಿಯತ್ತ ಮುಖ ಮಾಡಿದ್ದಾರಂತೆ. ಬಿಜೆಪಿಯ ಲಿಂಗಾಯತ […]

ಬೆಂಗಳೂರು: ಸಿಬಿಐ ಅಧಿಕಾರಿಗಳು ಭರ್ಜರಿ ಬೇಟೆಗೆ ಇಳಿದಿದ್ದಾರೆ. ಈಗಾಗಲೇ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಿನ್ನೆ CBI ಅಧಿಕಾರಿಗಳು ದಾಳಿ ನಡೆಸಿದ್ರು. ಈಗ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಸಿಬಿಐ ಕಂಟಕ ಎದುರಾಗಿದೆ. ಸಿಬಿಐ ತನಿಖೆಗೆ ಹೆದರಿ ಬಿಜೆಪಿ ಸೇರ್ತಾರಾ ಮಾಜಿ ಸಚಿವ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಕೆಳದ ಎರಡು ದಿನಗಳಿಂದ ಯೋಗಿಶ್ ಗೌಡ ದೆಹಲಿಯಲ್ಲಿದ್ದಾರೆ. ಇನ್ನು ತನಿಖೆಯಿಂದ ಪಾರಾಗಲು ವಿನಯ್ ಕುಲಕರ್ಣಿ ಬಿಜೆಪಿಯತ್ತ ಮುಖ ಮಾಡಿದ್ದಾರಂತೆ. ಬಿಜೆಪಿಯ ಲಿಂಗಾಯತ ಮುಖಂಡರ ಮೂಲಕ ಅಮಿತ್ ಶಾ ಭೇಟಿಗೆ ಯತ್ನಿಸಿದ್ದಾರಂತೆ. ಜಗದೀಶ್ ಶೆಟ್ಟರ್ ಮುಂದಿನ ದಿನಗಳಲ್ಲಿ ಗವರ್ನರ್ ಆಗುವ ಗುಮಾನಿ ಇದೆ.
ಹೀಗಾಗಿ ಹು-ಧಾ ಭಾಗದಲ್ಲಿ ಪ್ರಭಾವಿ ಮುಖಂಡನಾಗಿ ಹೊರಹೊಮ್ಮಲು ಅವಕಾಶ ಇದೆ. ಆ ಭಾಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ರೆ ಗೆಲುವು ಸುಲಭ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಬಿಜೆಪಿ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಇನ್ನು ಕೆಲ ಬಿಜೆಪಿ ನಾಯಕರು ವಿನಯ್ ಕುಲಕರ್ಣಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ.
ವಿನಯ್ ಕುಲಕರ್ಣಿ ಬಿಜೆಪಿ ಸೇರುವುದಕ್ಕೆ RSS ವಿರೋಧ: ಆದ್ರೆ RSS ಮೂಲದ ನಾಯಕರಿಂದ ವಿರೋಧ ವಿದೆ. ಕೇವಲ ತನಿಖೆಯಿಂದ ಬಚಾವ್ ಆಗಲು ಪಕ್ಷ ಸೇರಿಸಿಕೊಳ್ಳೋದು ಸರಿ ಅಲ್ಲ. ಕುಲಕರ್ಣಿ ಆಗಮನದಿಂದ ದೊಡ್ಡಮಟ್ಟದ ಬದಲಾವಣೆಯಾಗುವುದಿಲ್ಲ. ಹೀಗಾಗಿ ವಿನಯ್ ಕುಲಕರ್ಣಿ ಬಿಜೆಪಿ ಸೇರುವುದಕ್ಕೆ RSS ಮೂಲದ ನಾಯಕರ ವಿರೋಧವಿದೆ.
Published On - 12:51 pm, Tue, 6 October 20