ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮನೆ ಮೇಲೆ ನಿನ್ನೆ ನಡೆದ CBI ಅಧಿಕಾರಿಗಳ ದಾಳಿ ಬಳಿಕ ಇಂದು ನಂಜಾವಧೂತ ಶ್ರೀಗಳು ಶಿವಕುಮಾರ್​ರ ಸದಾಶಿವನಗರದ ನಿವಾಸಕ್ಕೆ ಭೇಟಿಕೊಟ್ಟರು. ಸ್ವಾಮೀಜಿಯವರನ್ನು ಬರಮಾಡಿಕೊಂಡ ಡಿ.ಕೆ ಶಿವಕುಮಾರ್​ ಶ್ರೀಗಳ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದರು. ಇದೇ ವೇಳೆ ಡಿಕೆಶಿಗೆ ನಂಜಾವಧೂತ ಸ್ವಾಮೀಜಿ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ. ಶಿವಕುಮಾರ್ ಜೊತೆ ಮಾತನಾಡಿದ ಶ್ರೀಗಳ ಕಳೆದ ವರ್ಷವೂ ನಿಮ್ಮ ವಿರುದ್ಧ ದಾಳಿ ಆಗಿದೆ. ED, IT ನೋಡಿದ್ದೀರಿ. ಒಳ್ಳೆಯದು ಆಗಬೇಕು ಅಂದ್ರೆ […]

ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ
Follow us
KUSHAL V
|

Updated on:Oct 06, 2020 | 1:54 PM

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮನೆ ಮೇಲೆ ನಿನ್ನೆ ನಡೆದ CBI ಅಧಿಕಾರಿಗಳ ದಾಳಿ ಬಳಿಕ ಇಂದು ನಂಜಾವಧೂತ ಶ್ರೀಗಳು ಶಿವಕುಮಾರ್​ರ ಸದಾಶಿವನಗರದ ನಿವಾಸಕ್ಕೆ ಭೇಟಿಕೊಟ್ಟರು.

ಸ್ವಾಮೀಜಿಯವರನ್ನು ಬರಮಾಡಿಕೊಂಡ ಡಿ.ಕೆ ಶಿವಕುಮಾರ್​ ಶ್ರೀಗಳ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದರು. ಇದೇ ವೇಳೆ ಡಿಕೆಶಿಗೆ ನಂಜಾವಧೂತ ಸ್ವಾಮೀಜಿ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ. ಶಿವಕುಮಾರ್ ಜೊತೆ ಮಾತನಾಡಿದ ಶ್ರೀಗಳ ಕಳೆದ ವರ್ಷವೂ ನಿಮ್ಮ ವಿರುದ್ಧ ದಾಳಿ ಆಗಿದೆ. ED, IT ನೋಡಿದ್ದೀರಿ. ಒಳ್ಳೆಯದು ಆಗಬೇಕು ಅಂದ್ರೆ ಕಷ್ಟ ದಾಟಿಕೊಂಡು ಹೋಗಬೇಕು. ಸ್ವಲ್ಪ ದಿನ ಕಷ್ಟ ಸಹಜ ಅಂತಾ ಸ್ವಾಮೀಜಿ ಡಿಕೆಶಿಗೆ ಧೈರ್ಯ ತುಂಬಿದರಂತೆ.

ಆಗ, ಶಿವಕುಮಾರ್​ ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಆಕ್ಟೀವ್ ಆಗಿದ್ದೇ ತಪ್ಪಾಯಿತು. ಬಿಜೆಪಿ ಬೈ ಎಲೆಕ್ಷನ್ ಅಂತಾ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಎಲ್ಲವನ್ನೂ ನೋಡಿದ್ದೀನಿ. ಇದು ಅದರ ಒಂದು ಭಾಗ ಎಂದು ಶಿವಕುಮಾರ್​ ಹೇಳದರಂತೆ.

ನನ್ನ ಮೇಲೆ ರೇಡ್ ಬೇಸರವಿಲ್ಲ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ. ಆದರೆ, ಮಗಳ ಮದುವೆಗೆ ತಂದ ಚಿನ್ನವನ್ನು ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು ಎಂದು ಸ್ವಾಮೀಜಿ ಮುಂದೆ ಡಿ.ಕೆ ಶಿವಕುಮಾರ್​ ಅಲವತ್ತುಕೊಂಡರಂತೆ.

‘CBI ಅಧಿಕಾರಿಗಳು ಕಿರುಕುಳ ಕೊಟ್ಟರು’ ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟರು. ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಡಿಕೆ ಶಿವಕುಮಾರ್​ ನಂಜಾವಧೂತ ಶ್ರೀಗಳ ಜೊತೆ ಚರ್ಚೆ ವೇಳೆ ಮಾಹಿತಿ ನೀಡಿದರು. CBI ರೇಡ್​ ಬಳಿಕ.. ಸಂಸದ DK ಸುರೇಶ್​ಗೆ ಕೊರೊನಾ ಪಾಸಿಟಿವ್

Published On - 10:49 am, Tue, 6 October 20

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ