ಯಲ್ಲಾಪುರದ ಗಣೇಶ್ ಪಾಲ್ ಹೊಳೆಯಲ್ಲಿ 11 ತಿಂಗಳ ಮಗು ಸೇರಿ ಮೂವರ ಶವ ಪತ್ತೆ..
ಕಾರವಾರ: ಮಗು ಸಮೇತ ಕಾಣೆಯಾಗಿದ್ದ ತಾಯಿ ಮಗಳಿಬ್ಬರು ಸಂಶಯಾಸ್ಪದವಾಗಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಗೋಡ್ಲು ಗ್ರಾಮದಲ್ಲಿ ನಡೆದಿದೆ. ನದಿಗೆ ಹಾರಿ ಮೂವರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ ಮಗಳು ಮತ್ತು 11 ತಿಂಗಳ ಮೊಮ್ಮಗನ ಮೃತದೇಹಗಳು ಇಲ್ಲಿನ ಗಣೇಶ್ ಪಾಲ್ ಹೊಳೆಯಲ್ಲಿ ಸಿಕ್ಕಿವೆ. ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್(28) ಮತ್ತು ವಾಣಿಯ 11 ತಿಂಗಳ ಮಗು ಸಾವನ್ನಪ್ಪಿದ್ದು, ಘಟನೆ ಯಾವ […]
ಕಾರವಾರ: ಮಗು ಸಮೇತ ಕಾಣೆಯಾಗಿದ್ದ ತಾಯಿ ಮಗಳಿಬ್ಬರು ಸಂಶಯಾಸ್ಪದವಾಗಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಗೋಡ್ಲು ಗ್ರಾಮದಲ್ಲಿ ನಡೆದಿದೆ.
ನದಿಗೆ ಹಾರಿ ಮೂವರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ ಮಗಳು ಮತ್ತು 11 ತಿಂಗಳ ಮೊಮ್ಮಗನ ಮೃತದೇಹಗಳು ಇಲ್ಲಿನ ಗಣೇಶ್ ಪಾಲ್ ಹೊಳೆಯಲ್ಲಿ ಸಿಕ್ಕಿವೆ. ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್(28) ಮತ್ತು ವಾಣಿಯ 11 ತಿಂಗಳ ಮಗು ಸಾವನ್ನಪ್ಪಿದ್ದು, ಘಟನೆ ಯಾವ ಕಾರಣಕ್ಕೆ ನಡೆಯಿತೆಂಬ ಬಗ್ಗೆ ನಿಖರವಾಗಿ ಮಾಹಿತಿ ತಿಳಿದುಬಂದಿಲ್ಲ.
ವಾಣಿಯನ್ನ 2 ವರ್ಷದ ಹಿಂದೆ ಶಿವಮೊಗ್ಗಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಯಲ್ಲಾಪುರರದ ಕಲಗೋಡ್ಲು ಗ್ರಾಮದ ತನ್ನ ತಾಯಿ ಮನೆಗೆ ಬಂದಂತ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಯಲ್ಲಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.