ಗೋಕರ್ಣ: ಕಡಲ ತೀರದಲ್ಲಿ ಈಜಲು ತೆರಳಿದ್ದ ಹೆಬ್ಬಗೋಡಿಯ ಮೂವರು ಜಲಸಮಾಧಿ

|

Updated on: Jan 21, 2021 | 6:02 PM

ಮೃತರು ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದು, ಒಟ್ಟಾರೆ 16 ಜನ ತಂಡ ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು.

ಗೋಕರ್ಣ: ಕಡಲ ತೀರದಲ್ಲಿ ಈಜಲು ತೆರಳಿದ್ದ ಹೆಬ್ಬಗೋಡಿಯ ಮೂವರು ಜಲಸಮಾಧಿ
ಸಂಬಂಧಿಕರ ಗೋಳಾಟ
Follow us on

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.

ಸುಮ(21), ತಿಪ್ಪೇಶ(20) ಹಾಗೂ ರವಿ(25) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದು, ಒಟ್ಟಾರೆ 16 ಜನ ತಂಡ ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ದೇವರ ದರ್ಶನದ ನಂತರ ಕಡಲ ತೀರದಲ್ಲಿ ಈಜಲು ತೆರಳಿದಾಗ ಈ ಅವಘಡ ಸಂಭವಿಸಿದೆ. ಇದೇ ಸಮಯದಲ್ಲಿ ಮುಳುಗುತ್ತಿದ್ದ ಇಬ್ಬರನ್ನ ಪ್ರವಾಸಿ ಬೋಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಮಗು ಸಾವು

 

Published On - 5:55 pm, Thu, 21 January 21