ಮಂಡ್ಯ: ಬೈಕ್ನಿಂದ ಆಯತಪ್ಪಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ಬಳಿ ನಡೆದಿದೆ.
ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ಹಾಗೂ ಈ ದಂಪತಿ ಮಗು ಸೇರಿ ಮೂವರು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಹಂಪ್ಸ್ ಮೇಲೆ ಬೈಕ್ ಹತ್ತಿದೆ. ಈ ವೇಳೆ ತಾಯಿ ರಂಜಿತಾ ಜೊತೆ ಕುಳಿತಿದ್ದ ಮಗು ರಂಜಿತಾ ಕೈತಪ್ಪಿ ಕೆಳಗೆ ಬಿದ್ದಿದೆ. ಹೀಗಾಗಿ ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ.
ಮಂಗಳೂರಿನಲ್ಲಿಯೂ ಮಗುವೊಂದು ಹೀಗೆಯೇ ಮೃತಪಟ್ಟಿತ್ತು
ಶಿವಕುಮಾರ್ ಮತ್ತು ರಂಜಿತಾ ದಂಪತಿ ಮದುವೆ ಕಾರ್ಯಕ್ರಮಕ್ಕೆ ಬೈಕ್ ನಲ್ಲಿ ಹೋಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಮ್ಮ ಪ್ರಪಂಚವೇ ಆಗಿದ್ದ ಮಗು ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಂಗಳೂರಿನಲ್ಲಿಯೂ ಕಳೆದ ವರ್ಷ ಇಂತಹುದೇ ಘಟನೆ ನಡೆದಿತ್ತು.
Published On - 1:03 pm, Fri, 20 November 20