KAS Mains ಪರೀಕ್ಷೆ ಮುಂದೂಡಿದ KPSC, ಆದ್ರೆ ವಾಣಿಜ್ಯ ವಿದ್ಯಾರ್ಥಿಗಳಿಗೆ ತಪ್ಪಲಿಲ್ಲ ಸಂಕಟ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2021ರ ಜನವರಿ 2ರಿಂದ 5ರವರೆಗೆ ನಡೆಸಲು ಉದ್ದೇಶಿಸಿದ್ದ KAS ಮುಖ್ಯ ಪರೀಕ್ಷೆಯನ್ನು ಮುಂದೂಡಿದೆ. ಈ ಪರೀಕ್ಷೆಗಳು ಫೆ.13ರಿಂದ 16ರವರೆಗೆ ನಡೆಯಲಿದೆ. ಕೆಪಿಎಸ್​ಸಿ ಈ ಮೊದಲು ಸಿದ್ಧಪಡಿಸಿದ್ದ ವೇಳಾಪಟ್ಟಿಯು ಕೇಂದ್ರ ಲೋಕ ಸೇವಾ ಆಯೋಗವು (UPSC) ಪ್ರಕಟಿಸಿದ್ದ ಪರೀಕ್ಷೆಗಳ ಅವಧಿಯಲ್ಲಿಯೇ ಇತ್ತು. ಯುಪಿಎಸ್​ಸಿ ಸಾಕಷ್ಟು ಮುಂಚಿತವಾಗಿಯೇ ದಿನಾಂಕ ಪ್ರಕಟಿಸಿದ್ದರೂ ಕೆಪಿಎಸ್ಸಿ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದ ಬಗ್ಗೆ ಉದ್ಯೋಗಾಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹಲವು ಅಭ್ಯರ್ಥಿಗಳು ಎರಡೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದರು. […]

KAS Mains ಪರೀಕ್ಷೆ ಮುಂದೂಡಿದ KPSC, ಆದ್ರೆ ವಾಣಿಜ್ಯ ವಿದ್ಯಾರ್ಥಿಗಳಿಗೆ ತಪ್ಪಲಿಲ್ಲ ಸಂಕಟ
Follow us
ಸಾಧು ಶ್ರೀನಾಥ್​
|

Updated on: Nov 20, 2020 | 12:46 PM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2021ರ ಜನವರಿ 2ರಿಂದ 5ರವರೆಗೆ ನಡೆಸಲು ಉದ್ದೇಶಿಸಿದ್ದ KAS ಮುಖ್ಯ ಪರೀಕ್ಷೆಯನ್ನು ಮುಂದೂಡಿದೆ. ಈ ಪರೀಕ್ಷೆಗಳು ಫೆ.13ರಿಂದ 16ರವರೆಗೆ ನಡೆಯಲಿದೆ.

ಕೆಪಿಎಸ್​ಸಿ ಈ ಮೊದಲು ಸಿದ್ಧಪಡಿಸಿದ್ದ ವೇಳಾಪಟ್ಟಿಯು ಕೇಂದ್ರ ಲೋಕ ಸೇವಾ ಆಯೋಗವು (UPSC) ಪ್ರಕಟಿಸಿದ್ದ ಪರೀಕ್ಷೆಗಳ ಅವಧಿಯಲ್ಲಿಯೇ ಇತ್ತು. ಯುಪಿಎಸ್​ಸಿ ಸಾಕಷ್ಟು ಮುಂಚಿತವಾಗಿಯೇ ದಿನಾಂಕ ಪ್ರಕಟಿಸಿದ್ದರೂ ಕೆಪಿಎಸ್ಸಿ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದ ಬಗ್ಗೆ ಉದ್ಯೋಗಾಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಹಲವು ಅಭ್ಯರ್ಥಿಗಳು ಎರಡೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಎರಡೂ ಪರೀಕ್ಷೆಗಳ ನಡುವೆ ಕೇವಲ ಒಂದು ವಾರದ ಅಂತರವಿತ್ತು. ಎರಡೂ ಪಠ್ಯಕ್ರಮಗಳಲ್ಲಿ ಗಮನಾರ್ಹ ವ್ಯತ್ಯಾಸವಿರುವ ಕಾರಣ ಅವಕಾಶ ಕೈತಪ್ಪುವ ಬಗ್ಗೆ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದರು.

ಮತ್ತೆ ಯಡವಟ್ಟು! ವಾಣಿಜ್ಯ ಪದವೀಧರರಿಗೆ ತಪ್ಪದ ಸಂಕಷ್ಟ ಕೆಪಿಎಸ್​ಸಿ ಡಿ. 21ರಿಂದ 24ರವರೆಗೆ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ 54 ಸಹಾಯಕ ನಿಯಂತ್ರಕರ (Assistant Controllers) ಹುದ್ದೆಗಳಿಗೆ ಪರೀಕ್ಷೆ ನಡೆಸುವುದಾಗಿ ನ.8ರಂದು ವೇಳಾಪಟ್ಟಿ ಪ್ರಕಟಿಸಿದೆ. ಕೆಪಿಎಸ್​ಸಿ ಘೋಷಿಸಿರುವ ಈ ವೇಳಾಪಟ್ಟಿಯು ವಾಣಿಜ್ಯ ವಿದ್ಯಾರ್ಥಿಗಳು ಬರೆಯಲಿರುವ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯ ಅವಧಿಯಲ್ಲಿಯೇ ಬರಲಿದೆ. ಆದ್ರೆ 54 ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 950 ವಾಣಿಜ್ಯ ಪದವೀಧರ ವಿದ್ಯಾರ್ಥಿಗಳಿಗೆ ಇದು ಸಂಕಷ್ಟ ತಂದೊಡ್ಡಿದೆ.

ಭಾರತೀಯ ಕಂಪನಿಗಳ ಕಾರ್ಯದರ್ಶಿ ಸಂಸ್ಥೆ (ICSI -Institute Of Company Secretaries of India) ಡಿ.21ರಿಂದ 30ರವರೆಗೆ ಕಂಪನಿ ಸೆಕ್ರಟರಿ ಪರೀಕ್ಷೆ ನಡೆಸಲು ಮತ್ತು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC -Staff Selection Commission) ಡಿ.24ರಿಂದ 30ರವರೆಗೆ ಸಿ ಮತ್ತು ಡಿ ದರ್ಜೆಯ ಸ್ಟೆನೊಗ್ರಾಫರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿವೆ.

‘ವೇಳಾಪಟ್ಟಿ ಬದಲಿಸುವ ಮೂಲಕ ಐಎಎಸ್ ಬರೆಯುವವರಿಗೆ ಕೆಪಿಎಸ್​ಸಿ ಅನುಕೂಲ ಮಾಡಿಕೊಟ್ಟಿದೆ. ನಮ್ಮ ಅಳಲೇಕೆ ಕೆಪಿಎಸ್​ಸಿಗೆ ಅರಿವಾಗುತ್ತಿಲ್ಲ’ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಸ್ಥಿತಿಗತಿ ಮಾಹಿತಿಗೆ ಶ್ವೇತಪತ್ರ ಪ್ರಕಟಿಸಿದ ಕೆಪಿಎಸ್​ಸಿ ಈವರೆಗೆ ಹೊರಡಿಸಿರುವ ವಿವಿಧ ನೇಮಕಾತಿ ಆದೇಶಗಳ ಸ್ಥಿತಿಗತಿ ಕುರಿತ 9 ಪುಟಗಳ ಶ್ವೇತಪತ್ರವನ್ನು ಕೆಪಿಎಸ್​ಸಿ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಒಟ್ಟು 22 ನೇಮಕಾತಿ ಅಧಿಸೂಚನೆಗಳ ಮಾಹಿತಿಯನ್ನು https://bit.ly/35MYg6v ಲಿಂಕ್ ಬಳಸಿ ನೋಡಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎನ್ನಲಾಗಿದೆ.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?