ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಪಾಳುಬಾವಿಗೆ ಬಿದ್ದು ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂಗಲದಲ್ಲಿರುವ ಕೂರ್ಗ್ ಗೆಸ್ಟ್ಹೌಸ್ ಬಳಿಯಿರುವ ಪಾಳುಬಾವಿಗೆ ಬಿದ್ದು ಹುಲಿ ಸಾವನ್ನಪ್ಪಿದೆ.
ಹುಲಿ ಸುಮಾರು ನಾಲ್ಕು ದಿನಗಳ ಹಿಂದೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಾವಿ ಸುಮಾರು 15 ಅಡಿ ಆಳವಿರುವ ಹಿನ್ನೆಲೆಯಲ್ಲಿ ಹುಲಿ ಅದರಲ್ಲಿ ಸಿಲುಕಿ ಹೊರಬರಲಾಗದೆ ಸಾವನ್ನಪ್ಪಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು, ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಶರಾವತಿ ಹಿನ್ನೀರಿನಲ್ಲಿ ಕಾಳಿಂಗನ ಸ್ವಚ್ಛಂದ ಓಡಾಟ.. ಅಪರೂಪದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ
Published On - 4:43 pm, Fri, 4 December 20