Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 24, 2021 | 10:16 PM

ಒಲಂಪಿಕ್ಸ್​ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್​ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್​ಗಳನ್ನು ತಯಾರು ಮಾಡಲು ಕೋಚ್​ಗಳು ಹಗಲು ರಾತ್ರಿ ಶ್ರಮಪಡುತ್ತಾರೆ.

Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ
ಕೋಚ್​ಗಳೊಂದಿಗೆ ಮೀರಾಬಾಯಿ ಚಾನು
Follow us on

ಭಾರತದ ಕ್ರೀಡಾಪಟುಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದರೆ ಕೇವಲ ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಉಬ್ಬುವುದಿಲ್ಲ, ಅವರನ್ನು ಆ ಹಂತಕ್ಕೆ ತಯಾರು ಮಾಡಿದ ತರಬೇತುದಾರರು ಮತ್ತು ಕೋಚ್​ಗಳು ಸಹ ನಗದು ಇನಾಮು ಪಡೆಯಲಿದ್ದಾರೆ. ಶನಿವಾರದಂದು ಮಹಿಳೆಯರು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿ ದ ಮೀರಾಬಾಯಿ ಚಾನು ಅವರ ಕೋಚ್ ವಿಜಯ ಶರ್ಮ ಅವರಿಗೆ 10 ಲಕ್ಷ ರೂ. ಗಳ ಬಹುಮಾನ ನೀಡುವ ಘೋಡಣೆಯನ್ನು ಭಾರತೀಯ ಒಲಂಪಿಕ್ ಸಂಸ್ಥೆ (ಐಒಎ) ಮಾಡಿದೆ. ಸಂಸ್ಥೆ ಮಾಡಿರುವ ಘೋಷಣೆ ಪ್ರಕಾರ ಚಿನ್ನದ ಪದಕೆ ಗೆಲ್ಲುವ ಕ್ರೀಡಾಪಟುವಿನ ಕೋಚ್​ ರೂ. 12.5 ಲಕ್ಷಗಳನ್ನು ಬಹುಮಾನ ಪಡೆಯಲಿದ್ದಾರೆ ಮತ್ತು ಕಂಚಿನ ಪದಕ ಗೆಲ್ಲುವ ಅಥ್ಲೀಟ್​ನ ಕೋಚ್​ ರೂ.7.5 ಲಕ್ಷ ನಗದನ್ನು ರಿವಾರ್ಡ್​ ಆಗಿ ಪಡೆಯಲಿದ್ದಾರೆ.

ಒಲಂಪಿಕ್ಸ್​ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್​ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್​ಗಳನ್ನು ತಯಾರು ಮಾಡಲು ಕೋಚ್​ಗಳು ಹಗಲು ರಾತ್ರಿ ಶ್ರಮಪಡುತ್ತಾರೆ. ಅಥ್ಲೀಟ್​ಗಳಂತೆ ಅವರು ಸಹ ತ್ಯಾಗಗಳನ್ನು ಮಾಡಬೇಕಾಗುತ್ತದೆ,’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಟೊಕಿಯೋ ಒಲಂಪಿಕ್ಸ್​​ನಲ್ಲಿ ಸ್ವರ್ಣ ಪದಕೆ ಗೆಲ್ಲುವ ಅಥ್ಲೀಟ್​ಗೆ ರೂ. 75 ಲಕ್ಷ ನೀಡುವುದಾಗಿ ಐಒಎ ಗುರುವಾರದಂದು ಹೇಳಿತ್ತು. ಅದಲ್ಲದೆ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಗಳಿಗೆ (ರಾಷ್ಟ್ರೀಯ ಕ್ರೀಡಾ ಒಕ್ಕೂಟ, ಎನ್​ಎಸ್​ಎಫ್) ಬೋನಸ್ ರೂಪದಲ್ಲಿ ರೂ. 25 ಲಕ್ಷ ನೀಡುವ ಘೋಷಣೆ ಯನ್ನೂ ಅದು ಮಾಡಿತ್ತು.

ಟೊಕಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವವರಿಗೆ ರೂ. 40 ಲಕ್ಷ ಮತ್ತು ಕಂಚಿನ ಪದಕ ಗೆಲ್ಲುವವರಿಗೆ ರೂ. 25 ಲಕ್ಷ ನೀಡುವ ಘೋಷಣೆಯನ್ನೂ ಐಒಎ ಮಾಡಿದೆ. ಹಾಗೆಯೇ, ಈ ಒಲಂಪಿಕ್ಸ್​ನಲ್ಲಿ ಬಾಗವಹಿಸಿರುವ ಪ್ರತಿಯೊಬ್ಬ ಅಥ್ಲೀಟ್​ಗೆ ರೂ. 1ಲಕ್ಷ ಮತ್ತು ಪದಕ ಗೆಲ್ಲುವ ಎನ್​ಎಸ್​ಎಫ್​ಗಳಿಗೆ ರೂ. 30 ಲಕ್ಷ ನೀಡುವುದಾಗಿ ಐಒಎ ಹೇಳಿದೆ.

ಇದನ್ನೂ ಓದಿ: ನನಗೆ ಅದೆಷ್ಟು ಸಂತೋಷವಾಗ್ತಿದೆ ಅಂದ್ರೆ, ಹೇಳೋಕೆ ಪದಗಳೇ ಸಾಕಾಗ್ತಿಲ್ಲ: ಟೊಕಿಯೊದಲ್ಲಿ ಪದಕ ಗೆದ್ದ ಮೀರಾಬಾಯಿ ಚಾನು

ಇದನ್ನೂ ಓದಿ: ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ