CM ಯಡಿಯೂರಪ್ಪ AK 47 ನಿಂದ ಬೆದರಿಸಿದರೂ ನಾಳೆ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ -ತನ್ವೀರ್

|

Updated on: Dec 04, 2020 | 12:21 PM

ಸಿಎಂ B.S.ಯಡಿಯೂರಪ್ಪ ಎಕೆ 47 ಕೊಟ್ಟು ಕಳಿಸಿದರೂ ನಾಳೆ ನಾವು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಓಲಾ, ಉಬರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ತನ್ವೀರ್ ಪಾಷಾ ಹೇಳಿಕೆ ನೀಡಿದ್ದಾರೆ.

CM ಯಡಿಯೂರಪ್ಪ AK 47 ನಿಂದ ಬೆದರಿಸಿದರೂ ನಾಳೆ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ -ತನ್ವೀರ್
ತನ್ವೀರ್ ಪಾಷಾ
Follow us on

ಬೆಂಗಳೂರು: ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್​ 5ರಂದು ಕರ್ನಾಟಕ ಬಂದ್​ಗೆ ಕನ್ನಡ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ಇದಕ್ಕೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ್ರೆ.. ಮತ್ತೆ ಕೆಲವು ಬೆಂಬಲ ಕೊಟ್ಟಿಲ್ಲ. ಪರ-ವಿರೋಧಗಳು ಕೇಳಿ ಬರುತ್ತಿದ್ದು ನಾಳೆ ಬಂದ್ ಇರುತ್ತೋ ಇಲ್ಲವೋ ಎನ್ನುವುದು ಗೊಂದಲವಾಗಿದೆ. ಈ ನಡುವೆ ಓಲಾ, ಊಬರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ತನ್ವೀರ್ ಪಾಷಾ ನಾವು ಬಂದ್ ಮಾಡೇ ಮಾಡ್ತೀವಿ ಎಂದು ಶಪಥ ಮಾಡಿದ್ದಾರೆ.

AK 47 ಕೊಟ್ಟು ಕಳಿಸಿದರೂ ಬಂದ್ ಮಾಡೇ ಮಾಡುತ್ತೇವೆ:
ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದ ತನ್ವೀರ್, ಸಿಎಂ B.S. ಯಡಿಯೂರಪ್ಪ ಎಕೆ 47 ಕೊಟ್ಟು ಕಳಿಸಿದರೂ ನಾಳೆ ನಾವು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾಳೆ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಹೋರಾಟಗಾರರಿಗೆ ಗುಂಡು ಹೊಡಿಬೇಕು ಅಂತಾ ಒಬ್ಬ ಸ್ವಾಮೀಜಿ ಹೇಳಿದ್ದರು. ಇದಕ್ಕೆ ನಮ್ಮ ಗುಂಡಿಗೆ ರೆಡಿ ಇದೆ. ಬಂದ್ ಹತ್ತಿಕ್ಕುವುದಕ್ಕೆ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಬಂದ್​ ಹತ್ತಿಕ್ಕುವುದಕ್ಕೆ ಅವರಿಂದ ಆಗುವುದಿಲ್ಲ ಎಂದು ಖಡಕ್ ಆಗಿ ತನ್ವೀರ್ ಪಾಷಾ ಪ್ರತಿಕ್ರಿಯಿಸಿದ್ದಾರೆ.

ಜನರೇ ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿ ಹೋರಾಟ ಯಶಸ್ವಿಗೊಳಿಸಬೇಕು:
ನಾಳಿನ ಕರ್ನಾಟಕ ಬಂದ್​ಗೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ಹಾಸನ‌ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಆಗಲಿದೆ. ಹೋಟೆಲ್ ಮಾಲೀಕರು, ಆಟೋ, ಟ್ಯಾಕ್ಸಿ ಚಾಲಕರು, ವರ್ತಕರು ಎಲ್ಲರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಯಾವುದೇ ಕಾರಣದಿಂದ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಲ್ಲ.

ಸರ್ಕಾರಿ ಕಚೇರಿಗಳಿಗೂ ಮುತ್ತಿಗೆ ಹಾಕುತ್ತೇವೆ. ಕೂಡಲೆ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಬೇಕು. ಬಂದ್ ವಿಫಲಗೊಳಿಸಲು ಸರ್ಕಾರ ಕುತಂತ್ರ ಮಾಡಿದೆ. ಜನರೇ ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಹಾಸನದಲ್ಲಿ ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್ ಹೇಳಿದ್ರು.

Published On - 12:07 pm, Fri, 4 December 20