ಮಂಡ್ಯ: KRSನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಇನ್ನೂ ಜೀವಂತವಾಗಿದೆ! ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆಗೆ ಮುಂದಾಗಿದ್ದರು. ಆದ್ರೆ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ಸರ್ಕಾರ ಬದಲಾದ್ರೂ ಯೋಜನೆ ಕೈಬಿಟ್ಪಿಲ್ಲ ಎಂದು ಸಚಿವ ಸಿ.ಟಿ.ರವಿ ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಬದಲಾಯ್ತು ಅಂದ್ರೆ ಅವರ ಆಲೋಚನೆಗಳನ್ನ ಅಲ್ಲಿಗೆ ಬಿಟ್ಟೋಗುವಂತ ಪದ್ಧತಿ ಇಲ್ಲ. ಸರ್ಕಾರ ನಿರಂತರ. ಪಕ್ಷಗಳು, ವ್ಯಕ್ತಿಗಳು ಬದಲಾಗಬಹುದು. ಆದ್ರೆ ಹಿಂದಿನವರ ಒಳ್ಳೆಯ ಆಲೋಚನೆಗಳನ್ನ ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದು ಡಿಸ್ನಿಲ್ಯಾಂಡ್ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಿಂದ ಡಿಸ್ನಿಲ್ಯಾಂಡ್ ಪ್ಲಾನ್ ಮಾಡಿರಲಿಲ್ಲ. ನೀರಾವರಿ ಇಲಾಖೆಯಿಂದ ಮಾಡಿಸ್ತೀವಿ ಎಂದು ಹೇಳಿದ್ರು. 2 ಸಾವಿರ ಕೋಟಿ ರೂ. ಹಾಕುವಷ್ಟು ಪ್ರವಾಸೋದ್ಯಮ ಇಲಾಖೆಯಲ್ಲಿ ಬಜೆಟ್ ಇಲ್ಲ. ಖಾಸಗಿ ಸಹಭಾಗಿತ್ವದಲ್ಲಿ KRS ಅಭಿವೃದ್ಧಿ ಮಾಡ್ಬೇಕು ಎಂಬ ಯೋಚನೆ ಇದೆ. ದೊಡ್ಡ ಬಜೆಟ್ನಲ್ಲಿ ಮಾಡ್ಬೇಕು ಅಂದ್ರೆ ಬೇರೆ ಇಲಾಖೆ ಅಥವಾ ಖಾಸಗಿ ಸಹಭಾಗಿತ್ವ ಮುಂದೆ ಬಂದ್ರೆ ಪ್ಲಾನ್ ಮಾಡ್ತೀವಿ ಎಂದರು.
Published On - 3:07 pm, Tue, 31 December 19