Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮದ ಮಧ್ಯೆ ಪೋಲಿಗಳ ಪುಂಡಾಟ!

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೊಸವರ್ಷವನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. 2019ಕ್ಕೆ ವಿದಾಯ ಹೇಳಿ 2020ನ್ನೂ ಅದ್ಧೂರಿಯಾಗಿ ಸ್ವಾಗತ ಮಾಡಲಾಯ್ತು. ಆದ್ರೆ, ಈ ವರ್ಷಾಚರಣೆ ವೇಳೆ ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದ್ರೂ ಕೆಲವೊಂದು ಅಹಿತಕರ ಘಟನೆ ನಡೆದು ಹೋಗಿವೆ. ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕಣ್ಣೀರಿಟ್ಟ ಯುವತಿ! ಯೆಸ್‌ ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪೋಲಿಗಳು ಪುಂಡಾಟ ಮೆರೆದಿದ್ದಾರೆ. ಕೋರಮಂಗಲದ 5 ನೇ ಬ್ಲಾಕ್​ನ 4 ನೇ ಬಿ ರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಯುವತಿಯೊಬ್ಬಳು […]

ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮದ ಮಧ್ಯೆ ಪೋಲಿಗಳ ಪುಂಡಾಟ!
Follow us
ಸಾಧು ಶ್ರೀನಾಥ್​
|

Updated on:Jan 01, 2020 | 7:46 AM

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೊಸವರ್ಷವನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. 2019ಕ್ಕೆ ವಿದಾಯ ಹೇಳಿ 2020ನ್ನೂ ಅದ್ಧೂರಿಯಾಗಿ ಸ್ವಾಗತ ಮಾಡಲಾಯ್ತು. ಆದ್ರೆ, ಈ ವರ್ಷಾಚರಣೆ ವೇಳೆ ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದ್ರೂ ಕೆಲವೊಂದು ಅಹಿತಕರ ಘಟನೆ ನಡೆದು ಹೋಗಿವೆ.

ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕಣ್ಣೀರಿಟ್ಟ ಯುವತಿ! ಯೆಸ್‌ ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪೋಲಿಗಳು ಪುಂಡಾಟ ಮೆರೆದಿದ್ದಾರೆ. ಕೋರಮಂಗಲದ 5 ನೇ ಬ್ಲಾಕ್​ನ 4 ನೇ ಬಿ ರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಯುವತಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ಈ ಬಗ್ಗೆ ಕೋರಮಂಗಲ ಪೊಲೀಸರಿಗೆ ಮಾಹಿತಿ ನೀಡಿದ ಯುವತಿ, ಪ್ರತಿಭಟನೆ ಮಾಡೋರನ್ನ ಅರೆಸ್ಟ್ ಮಾಡ್ತೀರಿ. ಆದ್ರೆ, ಲೈಂಗಿಕ ಕಿರುಕುಳ ನೀಡುವ ಇಂಥಹವರನ್ನ ಅರೆಸ್ಟ್ ಮಾಡಿ ಅಂತಾ ಕಣ್ಣೀರಿಟ್ಟಿದ್ದಾಳೆ. ಯುವತಿ ಮಾಹಿತಿ ನೀಡುತ್ತಲೇ ಸ್ಪಾಟ್​ಗೆ ತೆರಳಿದ ಪೊಲೀಸ್ರು ಕಿರುಕುಳ ನೀಡಿದವರನ್ನ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಇಂತಹ ಆರೋಪ ಕೇಳಿ ಬಂದ ಕೂಡಲೇ ಸ್ಥಳಕ್ಕೆ ಆಗಮಿಸಿ ಡಿಸಿಪಿ ಇಶಾ ಪಂಥ್ ಯುವತಿಯರನ್ನ ವಿಚಾರಿಸಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ರು.

ಹೊಸ ವರ್ಷಾಚರಣೆ ವೇಳೆ ಯುವಕನ ಮೇಲೆ ಹಲ್ಲೆ? ಇನ್ನು ನ್ಯೂ ಇಯರ್ ಸೆಲೆಬ್ರೆಷನ್ ವೇಳೆ ಬೆಂಗಳೂರಿನ ಎಂ.ಜಿ.ರಸ್ತೆಯ ಜಂಕ್ಷನ್​ನಲ್ಲಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆೆ. ಎಂ.ಜಿ.ರಸ್ತೆಯ ಜಂಕ್ಷನ್​ನಲ್ಲಿ ಯುವಕನ ತುಟಿ, ಮೂಗಿನಿಂದ ರಕ್ತ ಸೋರುತ್ತಿರೋದು ಕಂಡು ಬಂತು. ಈ ವೇಳೆ ಪೊಲೀಸರು ಯವಕನನ್ನು ಌಂಬುಲೆನ್ಸ್​ನಲ್ಲಿ ಕರೆದೊಯ್ದು, ಆಸ್ಪತ್ರೆಗೆ ದಾಖಲಿಸಿದ್ರು. ಯುವಕನ ಪರಿಸ್ಥಿತಿ ನೋಡುದ್ರೆ ಯಾರೋ ಹಲ್ಲೆ ಮಾಡಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿದೆ.

ಸೆಲೆಬ್ರೇಷನ್​ ನಡುವೆ ಮೊಬೈಲ್ ಕದ್ದ ಕಳ್ಳ! ನಗರದ ರೆಸಿಡೆನ್ಸಿ ರೋಡ್​ನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ವೇಳೆ ಮೊಬೈಲ್ ಕದ್ದ ಆರೋಪದಡಿ ಓರ್ವ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷದ ವೇಳೆ ಮೊಬೈಲ್‌ ಕದ್ದ ಆರೋಪದಡಿ ಓರ್ವನನ್ನ ಬಂಧಿಸಲಾಗಿದೆ.

ಹಾಗೇ ನ್ಯೂ ಇಯರ್ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದು ವಾಂತಿ ಮಾಡಿಕೊಂಡ ಯುವತಿಯನ್ನು ಆಕೆಯ ಸ್ನೇಹಿತರು ಎತ್ತಿಕೊಂಡು ಹೋದ ಘಟನೆ ನಡೆದಿದೆ. ಬ್ರಿಗೇಡ್ ರೋಡ್​ನಲ್ಲಿ ಕುಡಿದು ಅಸ್ವಸ್ಥಗೊಂಡ ಯುವತಿಯನ್ನ ಆಕೆಯ ಸ್ನೇಹಿತರು ಕರೆದೊಯ್ದದ್ರು. ಇನ್ನು ಎಂ.ಜಿ.ರಸ್ತೆಯಲ್ಲಿ ಕುಡಿದು ಅನುಚಿತ ವರ್ತನೆ ಮಾಡಿದ ಯುವಕನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದ್ರು. ಒಟ್ನಲ್ಲಿ ಪೊಲೀಸರ ಹದ್ದಿನ ಕಣ್ಣಿನ ನಡುವೆ ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಭರ್ಜರಿಯಾಗಿ ನಡೆಯಿತು. ಆದ್ರೆ, ಪೊಲೀಸರ ಕಣ್ಣು ತಪ್ಪಿಸಿ ಕೆಲ ಪುಂಡರ ಪುಂಡಾಟಕ್ಕೆ ಮಹಿಳೆಯರು ಪರದಾಡಿದ್ದು ಮಾತ್ರ ಸುಳ್ಳಲ್ಲ.

Published On - 7:45 am, Wed, 1 January 20