ಸ್ಕೂಟರ್‌ ಮೇಲೆ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ!

ಸ್ಕೂಟರ್‌ ಮೇಲೆ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ!

ಮೈಸೂರು: ತಡರಾತ್ರಿ ಮನೆಯಿಂದ ಹೊರಟಿದ್ದ ಯುವಕ ಇಂದು ಕಡಕೊಳ ಗ್ರಾಮದ ಬಳಿ ಸ್ಕೂಟರ್‌ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ(22) ಮೃತ ದುರ್ದೈವಿ.

ರಾತ್ರಿ ಮನೆಯಿಂದ ಹೋಗಿದ್ದ ಕೃಷ್ಣ ಮನೆಗೆ ವಾಪಸ್ ಬಂದಿರಲಿಲ್ಲ. ಕೃಷ್ಣನ ಮೈಮೇಲೆ ಗಾಯದ ಗುರುತುಗಳು ಇವೆ. ಸುಮಾರು 1 ಕಿಲೋ ಮೀಟರ್ ಸ್ಕೂಟರ್ ಎಳೆದು ತಂದಿರುವ ಗುರುತು ಸಹ ಪತ್ತೆಯಾಗಿದೆ. ಹೀಗಾಗಿ ಯಾರೋ ಕೊಲೆ ಮಾಡಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಹಾಗು ಮೈಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Click on your DTH Provider to Add TV9 Kannada