ಎಸಿ ಭೇಟಿ ಬಳಿಕ ಯೇಸು ಪ್ರತಿಮೆ ಕಾಮಗಾರಿ ಸ್ಥಗಿತ
ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಬೆಟ್ಟದಲ್ಲಿ ಯೇಸುವಿನ ಪ್ರತಿಮೆಯ ಕಾಮಗಾರಿ ಸ್ಥಗಿತಗೊಂಡಿದೆ. ಬೆಟ್ಟದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಹ ಜಾಗ ಖಾಲಿ ಮಾಡಿದ್ದಾರೆ. ಯೇಸುವಿನ ಪ್ರತಿಮೆ ನಿರ್ಮಾಣ ಸಂಬಂಧ ವರದಿ ನೀಡುವಂತೆ ಕಂದಾಯ ಸಚಿವ ಆರ್.ಅಶೋಕ್ ರಾಮನಗರ ಡಿಸಿ ಎಂ.ಎಸ್.ಅರ್ಚನಾಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಡಿಸೆಂಬರ್ 28ರಂದು ಕಪಾಲಬೆಟ್ಟಕ್ಕೆ ಕನಕಪುರ ತಹಶೀಲ್ದಾರ್ ಆನಂದಯ್ಯ, ರಾಮನಗರ ಎಸಿ ದಾಕ್ಷಾಯಿಣಿ ಭೇಟಿ ನೀಡಿದ್ದರು. ಅಂದಿನಿಂದಲೇ ಕಾಮಗಾರಿ ಕೆಲಸ ಸ್ಥಗಿತವಾಗಿದೆ. ತಹಶೀಲ್ದಾರ್ ಆನಂದಯ್ಯ ಅವರನ್ನೂ ಸಹ ರಾಜ್ಯ ಸರ್ಕಾರ […]
ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಬೆಟ್ಟದಲ್ಲಿ ಯೇಸುವಿನ ಪ್ರತಿಮೆಯ ಕಾಮಗಾರಿ ಸ್ಥಗಿತಗೊಂಡಿದೆ. ಬೆಟ್ಟದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಹ ಜಾಗ ಖಾಲಿ ಮಾಡಿದ್ದಾರೆ.
ಯೇಸುವಿನ ಪ್ರತಿಮೆ ನಿರ್ಮಾಣ ಸಂಬಂಧ ವರದಿ ನೀಡುವಂತೆ ಕಂದಾಯ ಸಚಿವ ಆರ್.ಅಶೋಕ್ ರಾಮನಗರ ಡಿಸಿ ಎಂ.ಎಸ್.ಅರ್ಚನಾಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಡಿಸೆಂಬರ್ 28ರಂದು ಕಪಾಲಬೆಟ್ಟಕ್ಕೆ ಕನಕಪುರ ತಹಶೀಲ್ದಾರ್ ಆನಂದಯ್ಯ, ರಾಮನಗರ ಎಸಿ ದಾಕ್ಷಾಯಿಣಿ ಭೇಟಿ ನೀಡಿದ್ದರು. ಅಂದಿನಿಂದಲೇ ಕಾಮಗಾರಿ ಕೆಲಸ ಸ್ಥಗಿತವಾಗಿದೆ. ತಹಶೀಲ್ದಾರ್ ಆನಂದಯ್ಯ ಅವರನ್ನೂ ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಸದ್ಯ ಕಪಾಲ ಬೆಟ್ಟಕ್ಕೆ ಸಾತನೂರು ಪೊಲೀಸರ ಭದ್ರತೆಯಲ್ಲಿದೆ.
ಡಿಸೆಂಬರ್ 25ರಂದು 114 ಅಡಿ ಎತ್ತರದ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶಿಲಾನ್ಯಾಸ ನೇರವೇರಿಸಿದ್ದರು. ಯೇಸು ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Published On - 1:25 pm, Tue, 31 December 19