ಇಂದು ಭಾರತ್ ಬಂದ್.. ಡಿ. 10ರಂದು ಸಾರಿಗೆ ಸಂಘಟನೆಗಳಿಂದ ಪ್ರತಿಭಟನೆಯಂತೆ?
ಇಂದು ನಾಡಿನಾದ್ಯಂತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಡಿಸೆಂಬರ್ 10 ರಂದು ಸಾರಿಗೆ ನೌಕರರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು: ಇಂದು ನಾಡಿನಾದ್ಯಂತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಡಿಸೆಂಬರ್ 10 ರಂದು ಸಾರಿಗೆ ನೌಕರರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ವೇತನ, ಸವಲತ್ತುಗಳ ವಿತರಣೆಯಲ್ಲಿ ತಾರತಮ್ಯ ಮಾಡಬಾರದು. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಸಾರಿಗೆ ನೌಕರರ ಸಂಘಟನೆಗಳು ಮುಂದಾಗಿವೆ. ಡಿ.10 ರಂದು ಕೆಎಸ್‌ಆರ್ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಚಲೋ ಪ್ರತಿಭಟನೆ ನಡೆಸಲಾಗುತ್ತೆ. ಈ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನೌಕರರ ಸಂಘಟನೆ ಪ್ಲಾನ್ ಮಾಡಿದೆ.
ಅಂದು ಬೆಳಗ್ಗೆ ಸಮವಸ್ತ್ರದೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಂಘಟನೆಗಳು ಕರೆ ನೀಡಿವೆ. ಆದರೆ ಸಾರಿಗೆ ಸಂಘಟನೆಗಳಲ್ಲೇ ಒಡಕು ಹುಟ್ಟಿಕೊಂಡಿದ್ದು ಕೆಲವೊಂದಿಷ್ಟು ಸಂಘಟನೆಗಳಿಂದ ಮಾತ್ರ ವಿಧಾನ ಸೌಧ ಚಲೋ ಚಳುವಳಿಗೆ ಬೆಂಬಲ ಸಿಕ್ಕಿದೆ. ಮುಂದೆ ಈ ಪ್ರತಿಭಟನೆ ನಿರ್ಧಾರ ಯಾವ ಸ್ವರೂಪ ಪಡೆಯುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Published On - 9:19 am, Tue, 8 December 20




