
ಕೊಪ್ಪಳ: ಚಿರತೆ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಹೊರವಲಯದಲ್ಲಿ ನಡೆದಿದೆ. ಚಿರತೆ ದಾಳಿಗೆ 22 ವರ್ಷದ ಹುಲಗೇಶ ಮೃತಪಟ್ಟಿದ್ದಾನೆ.
ಗ್ರಾಮದ ದುರ್ಗಾದೇವಿ ದೇವಸ್ಥಾನದ ಅಡುಗೆ ಭಟ್ಟನಾಗಿದ್ದ ಹುಲಗೇಶ ಬರ್ಹಿದೆಸೆಗೆ ಹೋದಾಗ ಚಿರತೆ ದಾಳಿ ಮಾಡಿ ಯುವಕನನ್ನು ತಿಂದು ಹಾಕಿದೆ. ಚಿರತೆ ದಾಳಿಗೆ ಆನೆಗೊಂದಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಚಿರತೆಯನ್ನು ಹಿಡಿಯಲು ಒತ್ತಾಯಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:05 am, Thu, 5 November 20