ಪೊಲೀಸರಿಗೂ ಮಾಸ್ಕ್ ಟಾರ್ಗೆಟ್ ನೀಡಿದ BBMP: ಜನರ ಕೆಂಗಣ್ಣಿಗೆ ಗುರಿಯಾದ ಪೊಲೀಸರು
ಬೆಂಗಳೂರು: ಮಹಾಮಾರಿ ಕೊರೊನಾ ಸಿಲಿಕಾನ್ ಸಿಟಿ ಮಂದಿಯನ್ನು ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಜೊತೆಗೆ ಸರ್ಕಾರಗಳು ಸಹ ನೀತಿ ನಿಯಮಗಳನ್ನು ರೂಪಿಸಿ ಅದರ ಪಾಲನೆಯಲ್ಲಿ ಜನ ಎಡವದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಲು ಪೊಲೀಸರಿಗೆ ಟಾರ್ಗೆಟ್ ನಿಗದಿಪಡಿಸಲಾಗಿದೆ. ಈ ಹಿಂದೆ ಮಾರ್ಷಲ್ಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿ ಪೊಲೀಸರಿಗೆ ಫೈನ್ ಟಾರ್ಗೆಟ್ ವಿಧಿಸಿದೆ. ಟಾರ್ಗೆಟ್ ರೀಚ್ ಮಾಡಲು ಪೊಲೀಸರು ಸಿಕ್ಕ ಸಿಕ್ಕವರ ಬಳಿ ವಸೂಲಿಗೆ ನಿಂತಿದ್ದಾರೆ. ಪ್ರತಿ ಠಾಣೆಗೆ ಪ್ರತಿದಿನಕ್ಕೆ ದಂಡ […]

ಬೆಂಗಳೂರು: ಮಹಾಮಾರಿ ಕೊರೊನಾ ಸಿಲಿಕಾನ್ ಸಿಟಿ ಮಂದಿಯನ್ನು ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಜೊತೆಗೆ ಸರ್ಕಾರಗಳು ಸಹ ನೀತಿ ನಿಯಮಗಳನ್ನು ರೂಪಿಸಿ ಅದರ ಪಾಲನೆಯಲ್ಲಿ ಜನ ಎಡವದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಲು ಪೊಲೀಸರಿಗೆ ಟಾರ್ಗೆಟ್ ನಿಗದಿಪಡಿಸಲಾಗಿದೆ.
ಈ ಹಿಂದೆ ಮಾರ್ಷಲ್ಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿ ಪೊಲೀಸರಿಗೆ ಫೈನ್ ಟಾರ್ಗೆಟ್ ವಿಧಿಸಿದೆ. ಟಾರ್ಗೆಟ್ ರೀಚ್ ಮಾಡಲು ಪೊಲೀಸರು ಸಿಕ್ಕ ಸಿಕ್ಕವರ ಬಳಿ ವಸೂಲಿಗೆ ನಿಂತಿದ್ದಾರೆ. ಪ್ರತಿ ಠಾಣೆಗೆ ಪ್ರತಿದಿನಕ್ಕೆ ದಂಡ ವಸೂಲಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಂಡ ವಸೂಲಿ ಮಾಡುವಂತೆ ಪೊಲೀಸ್ ಕಮಿಷನರ್ ಆದೇಶಿಸಿದ್ದಾರಂತೆ. ಕಮಿಷನರ್ ಆದೇಶದಿಂದ ಪೊಲೀಸರಿಗೆ ಈಗ ತಲೆನೋವು ಶುರುವಾಗಿದೆ. ಪ್ರತಿದಿನ 50 ಜನರಿಗೆ ಕಡ್ಡಾಯವಾಗಿ ದಂಡ ಹಾಕಲು ತಿಳಿಸಲಾಗಿದೆ. ಜನರ ಆಕ್ರೋಶಕ್ಕೆ ತುತ್ತಾಗಿ ಪೊಲೀಸರು ಸುಸ್ತಾಗಿದ್ದಾರೆ.