ರೈಲ್ವೇ ನಿಲ್ದಾಣದ ಮೆಷಿನ್ ಮೇಲೆ ಹಿಂದಿ ಫಲಕ: Twitterನಲ್ಲಿ ಶುರುವಾಯ್ತು ಭಾಷಾ ಸಮರ
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ಕೈ ತೊಳೆಯುವ ಹಾಗೂ ಶೂ ಪಾಲಿಷ್ ಮೆಷಿನ್‌ಗಳನ್ನ ರೇಲ್ವೇ ಇಲಾಖೆಗೆ ಕೊಡುಗೆಯಾಗಿ ನೀಡಿತ್ತು. ಇದನ್ನ ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿತ್ತು. ಆದರೆ, ಮೆಷಿನ್‌ಗಳ ಮೇಲೆ ಹಿಂದಿ ಫಲಕವನ್ನ ಅಳವಡಿಸಿರುವುದು ಇದೀಗ ಟ್ವಿಟರ್ನಲ್ಲಿ ಭಾರಿ ಸಮರಕ್ಕೆ ಅಣಿಮಾಡಿಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಫಲಕವನ್ನ ಯಾಕೆ ಅಳವಡಿಸಲಾಗಿದೆ ಎಂದು ಕೆಲವರು ರೈಲ್ವೇ ಇಲಾಖೆಗೆ ಪ್ರಶ್ನಿಸಿದ್ದಾರೆ. ಇದಕ್ಕೆ ರೇಲ್ವೇ ಇಲಾಖೆಯು ಈ ಮೇಷಿನ್ ಭಾರತದಲ್ಲಿದೆ ಎಂದು ಉತ್ತರ ನೀಡಿದೆ. […]

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ಕೈ ತೊಳೆಯುವ ಹಾಗೂ ಶೂ ಪಾಲಿಷ್ ಮೆಷಿನ್‌ಗಳನ್ನ ರೇಲ್ವೇ ಇಲಾಖೆಗೆ ಕೊಡುಗೆಯಾಗಿ ನೀಡಿತ್ತು. ಇದನ್ನ ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿತ್ತು. ಆದರೆ, ಮೆಷಿನ್‌ಗಳ ಮೇಲೆ ಹಿಂದಿ ಫಲಕವನ್ನ ಅಳವಡಿಸಿರುವುದು ಇದೀಗ ಟ್ವಿಟರ್ನಲ್ಲಿ ಭಾರಿ ಸಮರಕ್ಕೆ ಅಣಿಮಾಡಿಕೊಟ್ಟಿದೆ.
ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಫಲಕವನ್ನ ಯಾಕೆ ಅಳವಡಿಸಲಾಗಿದೆ ಎಂದು ಕೆಲವರು ರೈಲ್ವೇ ಇಲಾಖೆಗೆ ಪ್ರಶ್ನಿಸಿದ್ದಾರೆ. ಇದಕ್ಕೆ ರೇಲ್ವೇ ಇಲಾಖೆಯು ಈ ಮೇಷಿನ್ ಭಾರತದಲ್ಲಿದೆ ಎಂದು ಉತ್ತರ ನೀಡಿದೆ. ಇಲಾಖೆಯ ಉತ್ತರಕ್ಕೆ ಆಕ್ರೋಶಗೊಂಡಿರುವ ಕೆಲವರು ನಾವು ಭಾರತೀಯರು. ಆದ್ರೆ ಹಿಂದಿ ನಮ್ಮ ಮಾತೃಭಾಷೆ ಅಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿರುವ ರೈಲ್ವೆ ಅಧಿಕಾರಿಗಳು ಮಹತ್ವದ ಮಾಹಿತಿಯನ್ನ ಸ್ಥಳೀಯ ಭಾಷೆಯಲ್ಲಿ ನೀಡುವ ಪ್ರಯತ್ನ ಮಾಡ್ತೇವೆ. ಆದರೆ, ಫಲಕದಲ್ಲೂ ಭಾಷೆ ವಿಷಯ ಎತ್ತುವುದು ಸರಿಯಲ್ಲ. ಈ ಮೆಷಿನ್ನ ಕಂಪನಿಯೊಂದು ಕೊಡುಗೆಯಾಗಿ ನೀಡಿದ್ದಾರೆ. ಅವರ ಕಾರ್ಯವನ್ನ ಅಭಿನಂದಿಸುವ ಬದಲು ಪ್ರತಿ ಬಾರಿಯೂ ಹಿಂದಿ ವಿರೋಧಿ ನಿಲುವು ಪ್ರದರ್ಶನ ಮಾಡುವುದು ಸಮಂಜಸವಲ್ಲ ಎಂದು ಟ್ವೀಟ್ ಮಾಡಿದೆ.
ರೈಲ್ವೇ ಇಲಾಖೆಯ ವಾದವನ್ನು ಒಪ್ಪದ ಕೆಲವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
If ‘it’ is India, Hindi can be imposed, it seems pic.twitter.com/5kiew9t9Un
— Atticus Balgit Finch (@malayaliatticus) August 8, 2020



