ಕೊಡಗಿನಲ್ಲಿ ಲಾಟರಿ ಮಾರಾಟ ದಂಧೆ.. ಇಬ್ಬರ ಬಂಧನ
ಕೊಡಗು: ಜಿಲ್ಲೆಯಲ್ಲಿ ಹೊರ ರಾಜ್ಯಗಳ ಲಾಟರಿ ಚೀಟಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ವಿರಾಜಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪ ಪಟ್ಟಣದಲ್ಲಿ ಹೊರ ರಾಜ್ಯಗಳ ಲಾಟರಿ ಚೀಟಿ ಮಾರಾಟ ಮಾಡುತ್ತಿದ್ದ ಸೋಮರಾವ್ ಮತ್ತು ಎಂ.ಗಫೂರ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರ ಮೇಲೆ ಲಾಟರಿ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ, ಇಬ್ಬರಿಂದ 5,310 ರೂಪಾಯಿ ನಗದು ಮತ್ತು ಲಾಟರಿ ಚೀಟಿಯನ್ನ ಸಹ ವಶಕ್ಕೆ ಪಡೆಯಲಾಗಿದೆ.
ಕೊಡಗು: ಜಿಲ್ಲೆಯಲ್ಲಿ ಹೊರ ರಾಜ್ಯಗಳ ಲಾಟರಿ ಚೀಟಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ವಿರಾಜಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪ ಪಟ್ಟಣದಲ್ಲಿ ಹೊರ ರಾಜ್ಯಗಳ ಲಾಟರಿ ಚೀಟಿ ಮಾರಾಟ ಮಾಡುತ್ತಿದ್ದ ಸೋಮರಾವ್ ಮತ್ತು ಎಂ.ಗಫೂರ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರ ಮೇಲೆ ಲಾಟರಿ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ, ಇಬ್ಬರಿಂದ 5,310 ರೂಪಾಯಿ ನಗದು ಮತ್ತು ಲಾಟರಿ ಚೀಟಿಯನ್ನ ಸಹ ವಶಕ್ಕೆ ಪಡೆಯಲಾಗಿದೆ.