ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ, ಇಬ್ಬರು ಸವಾರರ ಸಾವು

ಭದ್ರಾವತಿ: ಎರಡು ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸವಾರರು ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೌರಪುರ ಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅಪಘಾತ ನಡೆದಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಮೃತ ಬೈಕ್ ಸವಾರರ ಪೈಕಿ ಒಬ್ಬರನ್ನು ಶಿವನಾಯ್ಕ (50) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕಿಯ ವಿವರ ಇನ್ನೂ ಪತ್ತೆ ಆಗಿಲ್ಲ.

ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ, ಇಬ್ಬರು ಸವಾರರ ಸಾವು

Updated on: Oct 07, 2020 | 1:57 PM

ಭದ್ರಾವತಿ: ಎರಡು ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸವಾರರು ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೌರಪುರ ಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅಪಘಾತ ನಡೆದಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡೂ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಮೃತ ಬೈಕ್ ಸವಾರರ ಪೈಕಿ ಒಬ್ಬರನ್ನು ಶಿವನಾಯ್ಕ (50) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕಿಯ ವಿವರ ಇನ್ನೂ ಪತ್ತೆ ಆಗಿಲ್ಲ.

Published On - 1:48 pm, Wed, 7 October 20