ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಸ ಕಾರುಗಳನ್ನ ಖದೀಮರು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಸದಾಶಿವ ನಗರ ಮತ್ತು ರಾಮತೀರ್ಥ ನಗರದಲ್ಲಿ ನಡೆದಿದೆ. ಸದಾಶಿವನಗರದಲ್ಲಿ ಡಾ. ಬೆಲ್ಲದ ಎಂಬುವವರ ಕಾರು ಕಳ್ಳತನವಾಗಿದ್ದು ರಾಮತೀರ್ಥ ನಗರದಲ್ಲಿ ಅನಿಲ್ ಪಾಟೀಲ್ ಕಾರು ಕಳವಾಗಿದೆ.
ಬೆಳಗಾವಿಯಲ್ಲಿ ಹೈಟೆಕ್ ಟೆಕ್ನಿಕ್ ಬಳಸಿ ಕಾರು ಕಳ್ಳತನ ಮಾಡುವ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ಕಾರಿನ ರಿಮೋಟ್ ಕೀ ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಎರಡು ಕಾರು ಕಳ್ಳತನ ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ. ಕಾರು ಕಳ್ಳತನ ಮಾಡ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಈ ಕಳ್ಳರು ಕಳ್ಳತನ ಕೃತ್ಯ ಮುಗಿದ ತಕ್ಷಣವೇ ತಮ್ಮ ಸಿಮ್ ಕಾರ್ಡ್ ಚೇಂಜ್ ಮಾಡ್ತಾರೆ. ಖತರ್ನಾಕ್ ಕಾರು ಕಳ್ಳರ ಗ್ಯಾಂಗ್ ಈಗ ಬೆಳಗಾವಿ ಪೊಲೀಸರಿಗೆ ತಲೆನೋವಾಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 3:41 pm, Sun, 22 November 20