ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಹಾರಿಹೋಯ್ತು ಮೂಕ ಜೀವಿಗಳ ಪ್ರಾಣಪಕ್ಷಿ..

ದಾವಣಗೆರೆ:ಅಪರಿಚಿತ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಹಸು ಹಾಗೂ ಒಂದು ಕರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳು ಇಹಲೋಕ ತ್ಯಜಿಸಿದವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತ ಲಾರಿ ಎರಡು ಹಸು ಹಾಗೂ ಒಂದು ಕರುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ಮೂಕಪ್ರಾಣಿಗಳ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿದೆ. ಈ ಘಟನೆ ಕಂಡ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರ […]

ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಹಾರಿಹೋಯ್ತು ಮೂಕ ಜೀವಿಗಳ ಪ್ರಾಣಪಕ್ಷಿ..
ಸಾಧು ಶ್ರೀನಾಥ್​

Updated on: Aug 14, 2020 | 10:50 AM

ದಾವಣಗೆರೆ:ಅಪರಿಚಿತ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಹಸು ಹಾಗೂ ಒಂದು ಕರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳು ಇಹಲೋಕ ತ್ಯಜಿಸಿದವು
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತ ಲಾರಿ ಎರಡು ಹಸು ಹಾಗೂ ಒಂದು ಕರುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ಮೂಕಪ್ರಾಣಿಗಳ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿದೆ. ಈ ಘಟನೆ ಕಂಡ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಾಂಪ್ರದಾಯಿಕ ವಿಧಿವಿಧಾನಗಳಂತೆ ಮೂಕ ಜೀವಿಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

ಮೃತಪಟ್ಟ ಮೂಕ ಜೀವಿಗಳು ಸಂತೆಬೆನ್ನೂರಿನ ಗ್ರಾಮದ ದೇವಿಗೆ ಬಿಟ್ಟಿದ್ದ ಪ್ರಾಣಿಗಳೆಂದು ತಿಳಿದುಬಂದಿದೆ. ಸದ್ಯ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us