ಕೋಲಾರ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾದ ಕಾರಣ ನಗರಸಭೆಯ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಪೌರ ಕಾರ್ಮಿಕರನ್ನು ಅಮಾನತು ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. ಕಿರಿಯ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ N.ದೀಪಾ, ಪೃಥ್ವಿರಾಜ್ ಮತ್ತು ಪೌರಕಾರ್ಮಿಕರಾದ ವಿ.ಮೋಹನ್, ವಿ.ಕುಮಾರ್ ಅಮಾನತು ಮಾಡಲಾಗಿದೆ.
ಕೋಲಾರ ಡಿಸಿ ಸತ್ಯಭಾಮ ನಗರ ಸಂಚಾರ ಕೈಗೊಂಡ ವೇಳೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡು ಬಂದಿದೆ. ಹೀಗಾಗಿ ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ವಾರ್ಡ್ಗಳಲ್ಲಿ ಕಸ ವಿಲೇವಾರಿ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಕೋಲಾರ ಡಿಸಿ ಸತ್ಯಭಾಮ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿ ಇಬ್ಬರನ್ನು ವರ್ಗಾವಣೆ ಮಾಡುವಂತೆ ಆದೇಶಿಸಿದ್ದಾರೆ.
ಪೌರಾಯುಕ್ತ, ಪರಿಸರ ಅಭಿಯಂತರ ವರ್ಗಾವಣೆಗೂ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೋಲಾರ ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ಪರಿಸರ ಅಭಿಯಂತರ ಪುನೀತ್ ವರ್ಗಾವಣೆಗೆ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದು ರವಾನಿಸಲಾಗಿದೆ.
ಕೃಷಿ ಖುಷಿ: ಜೇನು ಗೂಡಿಗೆ ಕೈ ಹಾಕಿ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಕೋಲಾರದ ಯುವಕ..