ಕೋಳಿ ತ್ಯಾಜ್ಯ ವಿಲೇವಾರಿಗೆ ಗುಂಡಿ ನಿರ್ಮಾಣ ಮಾಡುವಾಗ ಮಣ್ಣು ಬಿದ್ದು ಇಬ್ಬರು ಕಾರ್ಮಿಕರ ಸಾವು

| Updated By: ಸಾಧು ಶ್ರೀನಾಥ್​

Updated on: Mar 04, 2021 | 5:50 PM

ಕೋಳಿ ತ್ಯಾಜ್ಯ ವಿಲೇವಾರಿಗೆ ಗುಂಡಿ ನಿರ್ಮಾಣ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಮಣ್ಣಿನಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕೋಳಿ ತ್ಯಾಜ್ಯ ವಿಲೇವಾರಿಗೆ ಗುಂಡಿ ನಿರ್ಮಾಣ ಮಾಡುವಾಗ ಮಣ್ಣು ಬಿದ್ದು ಇಬ್ಬರು ಕಾರ್ಮಿಕರ ಸಾವು
ಮಣ್ಣು ಬಿದ್ದು ಕಾರ್ಮಿಕರಿಬ್ಬರು ಸಾವು
Follow us on

ಮಂಗಳೂರು: ಗುಂಡಿ ನಿರ್ಮಾಣ ವೇಳೆ ಮಣ್ಣು ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಲಪದವು ಎಂಬಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ಪಾರ್ಪಳ್ಳ ಗ್ರಾಮದ ಬಾಬು, ರವಿ ಮೃತ ದುರ್ದೈವಿಗಳು. ಕೋಳಿ ತ್ಯಾಜ್ಯ ವಿಲೇವಾರಿಗೆ ಗುಂಡಿ ನಿರ್ಮಾಣ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಮಣ್ಣಿನಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಡಮ್ಮಾಜೆ ಹಾಜಿ ಅಬ್ದುಲ್ಲಾರಿಗೆ ಸೇರಿದ ಕೋಳಿ ಫಾರ್ಮ್‌ನ ತ್ಯಾಜ್ಯ ವಿಲೇವಾರಿ ಮಾಡಲು ಈ ಗುಂಡಿ ತೋಡಲಾಗುತ್ತಿತ್ತು. ಜೆಸಿಬಿ ಮೂಲಕ ಹೊಂಡ ತೆಗೆಯುವ ಕೆಲಸ ನಡೆಸಲಾಗುತ್ತಿತ್ತು. ಈ ವೇಳೆ ಬಾಬು ಮತ್ತು ರವಿ ಹೊಂಡದ ಒಳಗೆ ಬಿದ್ದಿದ್ದು, ಮಣ್ಣು ಕುಸಿದಿದೆ. ಇದರಿಂದ ಮೇಲಕ್ಕೆ ಏಳಲಾಗದೆ ಉಸಿರು ಕಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ. ಮೃತದೇಹವನ್ನು ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಶವ ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಗುಂಡಿಗೆ ಇಬ್ಬರ ಪ್ರಾಣ ಬಲಿಯಾಗಿದೆ.

ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರ ಕಾರ್ಯಾಚರಣೆ

ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ

ಇದನ್ನೂ ಓದಿ: ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರ ದುರ್ಮರಣ