ಸಿಲಿಕಾನ್​ ಸಿಟಿಯಲ್ಲಿ ಇಂದು ಕೊರೊನಾಗೆ ಇಬ್ಬರು ವೃದ್ಧೆಯರು ಬಲಿ

|

Updated on: Jun 15, 2020 | 4:26 PM

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ನಗರದಲ್ಲಿ ದಿನೇ ದಿನೆ ಏರುತ್ತಿರುವ ಸಾವಿನ ಸಂಖ್ಯೆಗೆ ಇಂದು ಎರಡು ವೃದ್ಧೆಯರು ಸೇರಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳಾ ಸೋಂಕಿತರು ಇಂದು ಸಾವನ್ನಪ್ಪಿದ್ದಾರೆ. ಇಬ್ಬರ ವಯೋಮಿತಿ 75 ವರ್ಷ ಮೀರಿದೆ ಎಂದು ತಿಳಿದುಬಂದಿದೆ. ಇಬ್ಬರೂ ಸೋಂಕಿತರನ್ನು ಸೆಂಟ್‌ ಫಿಲೋಮಿನಾ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್​ ಮಾಡಲಾಗಿತ್ತು. ಜೂನ್​ 13ರಂದು 75 ವರ್ಷದ ಓರ್ವ ಮಹಿಳೆಯನ್ನು ಮೊದಲು ದಾಖಲಿಸಿದ್ದರು. ತದನಂತರ ಜೂನ್​ 14ರಂದು 80 ವರ್ಷದ […]

ಸಿಲಿಕಾನ್​ ಸಿಟಿಯಲ್ಲಿ ಇಂದು ಕೊರೊನಾಗೆ ಇಬ್ಬರು ವೃದ್ಧೆಯರು ಬಲಿ
Follow us on

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ನಗರದಲ್ಲಿ ದಿನೇ ದಿನೆ ಏರುತ್ತಿರುವ ಸಾವಿನ ಸಂಖ್ಯೆಗೆ ಇಂದು ಎರಡು ವೃದ್ಧೆಯರು ಸೇರಿಕೊಂಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳಾ ಸೋಂಕಿತರು ಇಂದು ಸಾವನ್ನಪ್ಪಿದ್ದಾರೆ. ಇಬ್ಬರ ವಯೋಮಿತಿ 75 ವರ್ಷ ಮೀರಿದೆ ಎಂದು ತಿಳಿದುಬಂದಿದೆ. ಇಬ್ಬರೂ ಸೋಂಕಿತರನ್ನು ಸೆಂಟ್‌ ಫಿಲೋಮಿನಾ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್​ ಮಾಡಲಾಗಿತ್ತು. ಜೂನ್​ 13ರಂದು 75 ವರ್ಷದ ಓರ್ವ ಮಹಿಳೆಯನ್ನು ಮೊದಲು ದಾಖಲಿಸಿದ್ದರು. ತದನಂತರ ಜೂನ್​ 14ರಂದು 80 ವರ್ಷದ ಮತ್ತೊರ್ವ ಮಹಿಳೆಯನ್ನು ಸಹ ದಾಖಲಿಸಿದ್ದರು. ನಂತರ ವಿಕ್ಟೋರಿಯಾದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ.

Published On - 2:52 pm, Mon, 15 June 20