ಚಮಕ್ ನೀಡಿ ಎಸ್ಕೇಪ್ ಆಗ್ತಿದ್ದ ತ್ರಿಬಲ್ ರೈಡಿಂಗ್ ಪುಂಡರ ಬೆನ್ನಟ್ಟಿದ BBMP Marshals
ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್ ಕೇರ್ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು […]

ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್ ಕೇರ್ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು ದಂಡ ಪಾವತಿಸಿರುವ ಬಗ್ಗೆ ವರದಿಯಾಗಿದೆ.
ತ್ರಿಬಲ್ ರೈಡಿಂಗ್ ಮಾಡ್ತಿದ್ದ ಪುಂಡರ ಹಿಂದೆ ಚೇಸ್!
ಬೆಂಗಳೂರಿನಲ್ಲೂ ನಮ್ಮ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಹಾಕದವರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಹಾಗೆಯೇ ಇಂದೂ ಸಹ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಇದೆ ವೇಳೆ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಮೂವರು ಪುಂಡ ಮಹಾಶಯರು ಅಲ್ಲಿಗೆ ಬಂದರು. ಮುಂದಕ್ಕೆ ಸಾಗಿದರೆ ನಮ್ಮನೂ ಹಿಡಿದು ಫೈನ್ ಜಡೀತಾರೆ ಅಂತಾ ಯೋಚಿಸಿ ಹೇಗಾದ್ರೂ ಮಾಡಿ ತಪ್ಪಿಸಿಕೊಳ್ಬೇಕು ಅಂತಾ ಅಲ್ಲೇ ಪ್ಲಾನ್ ಮಾಡಿದ್ರು. ಬ್ಯಾರಿಕೇಡ್ ಬಳಿ ಬಂದ ಪುಂಡರನ್ನು ತಡೆಯಲು ಮುಂದಾದ ಮಾರ್ಷಲ್ಗಳಿಗೆ ಚಮಕ್ ಕೊಟ್ಟು ಎಸ್ಕೇಪ್ ಆದರು. ಆದರೆ ತಪ್ಪಿಸಿಕೊಂಡ್ವಿ ಅಂತಾ ಅಂದುಕೊಂಡವರಿಗೆ ಶಾಕ್ ಕಾದಿತ್ತು. ತಕ್ಷಣವೇ ಮಾರ್ಷಲ್ಗಳು ಅವರನ್ನು ಬೆನ್ನಟ್ಟಿ ಹಿಡಿದರು.
Published On - 1:37 pm, Mon, 15 June 20




