
ಬೆಂಗಳೂರು: ರಾಜಧಾನಿಯಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ ಜಪ್ತಿ ಕೇಸ್ಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ₹3 ಕೋಟಿ ಮೌಲ್ಯದ ಬಂಗಾರದ ಓಡವೆಗಳನ್ನ ತಂದಿದಾದ್ರೂ ಎಲ್ಲಿಂದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಿನ್ನೆ ರಾತ್ರಿ ಗಸ್ತಿನಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಿ ದಾಖಲೆರಹಿತ ಚಿನ್ನದಾಭರಣಗಳನ್ನು ಜಪ್ತಿ ಮಾಡಿದ ಪಿಎಸ್ಐ ಶ್ರೀಮತಿ ಸವಿತಾ, ಕಾನ್ಸ್ಟೇಬಲ್ಸ್ ಆನಂದ ಹಾಗೂ ಹನಮಂತರವರನ್ನು @DCPWestBCP ಕಛೇರಿಯಲ್ಲಿ ಅಭಿನಂದಿಸಲಾಯಿತು. @acpchikpete @CityMarketPS1 ಹಾಜರಿದ್ದರು.@CPBlr @DgpKarnataka @BlrCityPolice @AddlCPWest pic.twitter.com/ChdQqDpqJB
— Dr. Sanjeev M Patil, IPS (@DCPWestBCP) November 21, 2020
ಮುಂಬೈನಿಂದ ಬೆಂಗಳೂರಿಗೆ 6 ಕೆಜಿ 55 ಗ್ರಾಂ ಚಿನ್ನಾಭರಣವನ್ನು ತರಲಾಗಿತ್ತು. ಕೊರಿಯರ್ ಮೂಲಕ ಚಿನ್ನ ಬಂದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆದರೆ ಬೇರೆ ಯಾವ ಮಾಹಿತಿಯನ್ನು ಬಾಯ್ಬಿಟ್ಟಿಲ್ಲ. ಯಾವ ಕೊರಿಯರ್, ಯಾರಿಗೆ ಯಾವಾಗ ಬಂತು ಅನ್ನೋದು ತಿಳಿದು ಬಂದಿಲ್ಲ. 6 ಕೆಜಿ 55 ಗ್ರಾಂ ಚಿನ್ನಾಭರಣ ಯಾರಿಗೆ ಸೇರಿದ್ದು ಅಂತಾನು ಬಾಯ್ಬಿಡುತ್ತಿಲ್ಲ. 65 ನೆಕ್ಲೇಸ್ , 7 ಜತೆ ಬಳೆ, 150 ಗ್ರಾಂ ಓಲೆ ಎಲ್ಲವೂ ಬೇರೆ ಬೇರೆ ಡಿಸೈನ್ಗಳಿದ್ದು ಈ ಎಲ್ಲಾ ಆಭರಣಗಳು ಸ್ಯಾಂಪಲ್ಸ್ ಅನ್ನೋ ಮಾಹಿತಿ ತನಿಖೆ ವೇಳೆ ಪತ್ತೆಯಾಗಿದೆ.
ನೈಟ್ ಬೀಟ್ ಗೋಲ್ಡ್ ಕೇಸ್ ನಲ್ಲಿ IT ಇಲಾಖೆ ಎಂಟ್ರಿ:
ಇದನ್ನೂ ಓದಿ: KR Market ನೈಟ್ ಬೀಟ್ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನ, ಎಲ್ಲಿ.. ಎಲ್ಲಿ? ನೀವೂ ನೋಡಿ..
Published On - 8:39 am, Sun, 22 November 20