ಪರಿಚಯವೇ ಇರದ ಕಾರ್ತಿಕ್ ತ್ಯಾಗಿಯ ಹೆಸರೀಗ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ನಾಲಿಗೆ ಮೇಲಿದೆ!
ಐಪಿಎಲ್ ಟೂರ್ನಿಯಲ್ಲಿ ಬುಮ್ರಾ ಮತ್ತು ತ್ಯಾಗಿ ಬೇರೆ ಬೇರೆ ತಂಡಕ್ಕೆ ಆಡುತ್ತಾರೆ. ಆದರೆ ಕಳೆದ ವರ್ಷ ಟೀಮ್ ಇಂಡಿಯ ಅಸ್ಟ್ರೇಲಿಯ ಪ್ರವಾಸ ತೆರಳಿದ್ದಾಗ ಅವರಿಬ್ಬರು ಒಂದೇ ಡ್ರೆಸಿಂಗ್ ರೂಮನ್ನು ಶೇರ್ ಮಾಡಿಕೊಂಡಿದ್ದರು.
ಮಂಗಳವಾರದವರೆಗೆ ಕೆಲವರಿಗಷ್ಟೇ ಗೊತ್ತಿದ್ದ ರಾಜಸ್ತಾನ ರಾಯಲ್ಸ್ ತಂಡದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಬುಧವಾರ ಬೆಳಗಾಗುವ ಹೊತ್ತಿಗೆ ಎಲ್ಲರ ಮನೆಮಾತಾಗಿದ್ದರು! ಪಂಜಾಬ್ ಕಿಂಗ್ಸ್ ವಿರುದ್ಧ ಕಾರ್ತಿಕ್ ಎಸೆದ ಆ ಕೊನೆಯ ಓವರ್ ಅವರನ್ನು ರಾತ್ರೋರಾತ್ರಿ ಹೀರೋ ಮಾಡಿದೆ. ಯಾಕಾಗಬಾರದು? ಇಪ್ಪತ್ತರ ಪ್ರಾಯದ ಯುವ ಬೌಲರ್ಗೆ ಟೀಮಿನ ಕ್ಯಾಪ್ಟನ್ ಕೊನೆಯ ಓವರ್ನಲ್ಲಿ 4 ರನ್ಗಳನ್ನು ಡಿಫೆಂಡ್ ಮಾಡುವಂತೆ ಹೇಳಿ ಅವನೆಡೆ ಚೆಂಡೆಸೆದಾಗ ಕ್ಯಾಪ್ಟನ್ ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಯುವ ಪ್ರತಿಭೆ ಉಳಿಸಿಕೊಂಡಿದ್ದು ಶ್ಲಾಘನೀಯವಲ್ಲದೆ ಮತ್ತೇನು? ಆ ಓವರ್ನಲ್ಲಿ ಅವರು ಕೇವಲ 2 ರನ್ ನೀಡಿ, 2 ವಿಕೆಟ್ ಪಡೆದು ತಮ್ಮ ಟೀಮಿಗೆ 2 ರನ್ಗಳ ರೋಮಾಂಚಕ ಗೆಲುವು ದೊರಕಿಸಿದರು.
ಮೈನವಿರೇಳಿಸಿದ ಮಂಗಳವಾರದ ಪಂದ್ಯದ ನಂತರ ಹಾಲಿ ಮತ್ತು ಮಾಜಿ ಆಟಗಾರರು ತ್ಯಾಗಿಯನ್ನು ಪ್ರಶಂಸಿಸಿ ಮಾತಾಡುತ್ತಿದ್ದಾರೆ. ಇಂಗ್ಲೆಂಡ್ ಮಾಜಿ ಆಟಗಾರ ಗ್ರೇಮ್ ಸ್ವ್ಯಾನ್ ಅವರು, ‘ನಾನು ಇದುವರೆಗೆ ನೋಡಿರುವ ಅತ್ಯುತ್ತಮ ಕೊನೆಯ ಓವರ್,’ ಅಂತ ಹೇಳಿದರೆ, ಭಾರತ ಹಾಗೂ ಆರ್ ಸಿ ಬಿ ಟೀಮಿನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್, ‘ಮಂಗಳವಾರ ರಾತ್ರಿ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ಏನು ನಡೆಯಿತು ಅಂತ ಹೇಳಲು ನನ್ನಲ್ಲಿ ಶಬ್ದಗಳಿಲ್ಲ,’ ಎಂದರು.
ಆದರೆ ತ್ಯಾಗಿಗೆ ಅತಿದೊಡ್ಡ ಕಾಂಪ್ಲಿಮೆಂಟ್ ಸಿಕ್ಕಿದ್ದು ಪ್ರಾಯಶಃ ಜಸ್ಪ್ರೀತ್ ಬುಮ್ರಾ ಅವರಿಂದ, ತ್ಯಾಗಿಯನ್ನು ಅಭಿನಂದಿಸುವ ಟ್ವೀಟ್ಪೋಸ್ಟ್ ಮಾಡಿದ್ದಾರೆ. ‘ಅದೆಂಥ ಓವರ್ ಕಾರ್ತಿಕ್ ತ್ಯಾಗಿ! ಅಂಥ ಒತ್ತಡದಲ್ಲಿ ಸಮಚಿತ್ತವನ್ನು ಕಾಯ್ದುಕೊಂಡು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದು. ಗ್ರೇಟ್ ಸ್ಟಫ್, ನಂಬಲಸದಳವಾದದ್ದು!’ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
https://twitter.com/Jaspritbumrah93/status/1440381187059453952?s=20
ಬುಮ್ರಾ ಅವರ ಟ್ವೀಟ್ಗೆ ನೀಡಿರುವ ಉತ್ತರದ ಮೂಲಕವೂ ತ್ಯಾಗಿ ಎಲ್ಲರ ಮನ ಗೆದ್ದಿದ್ದಾರೆ. ‘ನನ್ನ ಹೀರೋ ಅವರಿಂದ ಹಾಗೆ ಪ್ರಶಂಸೆಗೊಳಗಾಗುವುದು ಅನಿರ್ವಚನೀಯ ಅನುಭವ,’ ಎಂದು ತ್ಯಾಗಿ ಟ್ವೀಟ್ ಮಾಡಿದ್ದಾರೆ.
https://twitter.com/tyagiktk/status/1440426120864677890?s=20
ಐಪಿಎಲ್ ಟೂರ್ನಿಯಲ್ಲಿ ಬುಮ್ರಾ ಮತ್ತು ತ್ಯಾಗಿ ಬೇರೆ ಬೇರೆ ತಂಡಕ್ಕೆ ಆಡುತ್ತಾರೆ. ಆದರೆ ಕಳೆದ ವರ್ಷ ಟೀಮ್ ಇಂಡಿಯ ಅಸ್ಟ್ರೇಲಿಯ ಪ್ರವಾಸ ತೆರಳಿದ್ದಾಗ ಅವರಿಬ್ಬರು ಒಂದೇ ಡ್ರೆಸಿಂಗ್ ರೂಮನ್ನು ಶೇರ್ ಮಾಡಿಕೊಂಡಿದ್ದರು. ನೆಟ್ ಬೌಲರ್ ಆಗಿ ತ್ಯಾಗಿಯನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಪ್ರಾಯಶಃ ಅದೇ ಪ್ರವಾಸದಲ್ಲಿ ತ್ಯಾಗಿ ಅವರು ಬುಮ್ರಾ ಅವರ ಬೌಲಿಂಗ್ ಕಲೆಯನ್ನು ಕರಗತ ಮಾಡಿಕೊಂಡಿರಬೇಕು ಅಂತ ಹೇಳಲಾಗುತ್ತಿದೆ.
ಆ ಸರಣಿಯಲ್ಲಿ ಭಾರತದ ಹಲವಾರು ಅಟಗಾರರು ಗಾಯಗೊಂಡಿದ್ದರಿಂದ ರಿಸರ್ವ್ಸ್ನಲ್ಲಿದ್ದ ಆಟಗಾರರಿಗೆಲ್ಲ ಟೆಸ್ಟ್ಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತಾದರೂ ತ್ಯಾಗಿ ಮಾತ್ರ ಅದು ಗಿಟ್ಟಿರಲಿಲ್ಲ. ಅದರೆ ಸರಣಿಯಲ್ಲಿ ಭಾರತ ಸ್ಮರಣಿಯ ಗೆಲುವು ಸಾಧಿಸಿದ ಬಳಿಕ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಆಗಿದ್ದ ಅಜಿಂಕ್ಯಾ ರಹಾನೆ ಒಬ್ಬ ನೆಟ್ ಬೌಲರ್ ಆಗಿ ತ್ಯಾಗಿ ಟೀಮಿಗೆ ನೀಡಿದ ಕಾಣಿಕೆಯನ್ನು ಉಲ್ಲೇಖಿಸುತ್ತಾ, ‘ಕಾರ್ತಿಕ್, ನಿಮ್ಮ ಕಾಂಟ್ರಿಬ್ಯೂಷನ್ ಅಮೋಘವಾದದ್ದು,’ ಎಂದು ಹೇಳಿದ್ದರು. ಅದು ಕಾರ್ತಿಕ್ ಪಾಲಿಗೆ ದೊಡ್ಡ ಗೌರವವಾಗಿತ್ತು.
‘ನಾನು ಎಷ್ಟು ಓವರ್ಗಳನ್ನು ಬೌಲ್ ಮಾಡಿದೆನೆಂಬ ಲೆಕ್ಕ ಇಟ್ಟಿರುವುದಿಲ್ಲ. ಆದರೆ ಕ್ಯಾಪ್ಟನ್ ಹೇಳಿದ ಮಾತುಗಳು ಸದಾ ನೆನಪಿನಲ್ಲುಳಿಯುತ್ತವೆ. ನೆಟ್ಸ್ ನಲ್ಲಿ ಮಾತ್ರ ಶ್ರಮಪಡುವ ತ್ಯಾಗಿಯಂಥ ಒಬ್ಬ ಬೌಲರ್ ಗೆ ಅದಕ್ಕಿಂತ ದೊಡ್ಡ ಕಾಂಪ್ಲಿಮೆಂಟ್ ಮತ್ತೊಂದಿಲ್ಲ,’ ಎಂದು ಬುಮ್ರಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ: IPL 2021: ಟಿ. ನಟರಾಜನ್ಗೆ ಕೊರೊನಾ ಪಾಸಿಟಿವ್! ಸೋಂಕಿತನ ಸಂಪರ್ಕದಲ್ಲಿದ್ದ 6 ಸದಸ್ಯರ ವಿವರ ಇಲ್ಲಿದೆ
Published On - 6:43 am, Thu, 23 September 21