IPL 2021: ಟಿ. ನಟರಾಜನ್ಗೆ ಕೊರೊನಾ ಪಾಸಿಟಿವ್! ಸೋಂಕಿತನ ಸಂಪರ್ಕದಲ್ಲಿದ್ದ 6 ಸದಸ್ಯರ ವಿವರ ಇಲ್ಲಿದೆ
IPL 2021: ಸನ್ ರೈಸರ್ಸ್ ಹೈದರಾಬಾದ್ ಕ್ರಿಕೆಟಿಗ ನಟರಾಜನ್ಗೆ ಕೊರೊನಾ ಪಾಸಿಟಿವ್ ಎಂಬ ಹುದ್ದಿ ಹೊರಬಿದ್ದಿದೆ. ಇದರೊಂದಿಗೆ, ಅವರ ಸಂಪರ್ಕಕ್ಕೆ ಬಂದ ಇತರ ಆರು ಜನರನ್ನು (ಆಟಗಾರರು, ಸಿಬ್ಬಂದಿ) ಪ್ರತ್ಯೇಕವಾಗಿ ಇರಿಸಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ಕ್ರಿಕೆಟಿಗ ನಟರಾಜನ್ಗೆ ಕೊರೊನಾ ಪಾಸಿಟಿವ್ ಎಂಬ ಹುದ್ದಿ ಹೊರಬಿದ್ದಿದೆ. ಇದರೊಂದಿಗೆ, ಅವರ ಸಂಪರ್ಕಕ್ಕೆ ಬಂದ ಇತರ ಆರು ಜನರನ್ನು (ಆಟಗಾರರು, ಸಿಬ್ಬಂದಿ) ಪ್ರತ್ಯೇಕವಾಗಿ ಇರಿಸಲಾಗಿದೆ. ಇದರೊಂದಿಗೆ, ಇಂದು ಸಂಜೆ ದೆಹಲಿ ಕ್ಯಾಪಿಟಲ್ಸ್‌ನೊಂದಿಗೆ ನಡೆಯಲಿರುವ ಪಂದ್ಯ ನಡೆಯುವುದು ಅನುಮಾನವಾಗಿದೆ. ಉಳಿದ ಆಟಗಾರರು ಮತ್ತು ಸಿಬ್ಬಂದಿಯ ಬಗ್ಗೆ ಆರ್‌ಟಿ ಪಿಸಿಆರ್ ವರದಿ ಬರಬೇಕಿದೆ. ಅವರ ಪರೀಕ್ಷಾ ಫಲಿತಾಂಶದ ನಂತರ ಪಂದ್ಯ ನಿರ್ವಹಣೆ ಅಥವಾ ಮುಂದೂಡುವಿಕೆಯ ಕುರಿತು ಪ್ರಕಟಣೆ ಬರುವ ಸಾಧ್ಯತೆಯಿದೆ.
6 ಮಂದಿ ಕ್ವಾರಂಟೈನ್ ನಟರಾಜನ್ ಸಂಪರ್ಕಕದಲ್ಲಿದ್ದ ಆರು ಸದಸ್ಯರನ್ನು ಆಲ್ ರೌಂಡರ್ ವಿಜಯ್ ಶಂಕರ್, ತಂಡದ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ತಂಡದ ವೈದ್ಯ ಅಂಜನಾ ವನ್ನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಎಂದು ಗುರುತಿಸಲಾಗಿದೆ.
ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಐಪಿಎಲ್ 2021 ಪಂದ್ಯಾವಳಿಯನ್ನು ಈಗಾಗಲೇ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಆದರೆ ಈಗ ಬಿಸಿಸಿಐನ ಕಟ್ಟುನಿಟ್ಟಿನ ಬಯೋ ಬಬಲ್ ನಿಯಮದಲ್ಲೂ ಆಟಗಾರರಿಗೆ ಕೊರೊನಾ ತಗುಲಿರುವುದು ಕ್ರಿಕೆಟ್ ಬಿಗ್ಬಾಸ್ಗಳಿಗೆ ನುಂಗಲಾರದ ತುತ್ತಾಗಿದೆ. ಅದಾಗ್ಯೂ ನಟರಾಜನ್ ಅವರಿಗೆ ಕೊರೊನಾ ಹೇಗೆ ತಗುಲಿತು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
NEWS – Sunrisers Hyderabad player tests positive; six close contacts isolated.
More details here – https://t.co/sZnEBj13Vn #VIVOIPL
— IndianPremierLeague (@IPL) September 22, 2021
Published On - 3:53 pm, Wed, 22 September 21