Budget 2021: ವಿದ್ಯುತ್​ ಹಂಚಿಕೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕಿದೆ ಎಂದ ತಜ್ಞರು

| Updated By: ರಶ್ಮಿ ಕಲ್ಲಕಟ್ಟ

Updated on: Jan 30, 2021 | 5:11 PM

Union Budget 2021: ನವೀಕರಿಸಬಹುದಾದ ವಿದ್ಯುತ್​ ಯೋಜನೆಗೆ ಸರ್ಕಾರ ಒತ್ತು ನೀಡಬೇಕು. ಇದಕ್ಕಾಗಿ ದೀರ್ಘಾವಧಿ ಪಾಲಿಸಿಗಳನ್ನು ಸರ್ಕಾರ ಜಾರಿಗೊಳಿಸಲು ಒತ್ತು ನೀಡಬೇಕು ಎಂದು ಐಸಿಆರ್​ಎ ತಜ್ಞರು ಹೇಳಿದ್ದಾರೆ.

Budget 2021: ವಿದ್ಯುತ್​ ಹಂಚಿಕೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕಿದೆ ಎಂದ ತಜ್ಞರು
ಸಾಂದರ್ಭಿಕ ಚಿತ್ರ
Follow us on

ಈ ಬಾರಿಯ ಬಜೆಟ್​ನಲ್ಲಿ ವಿದ್ಯುತ್​ ಹಂಚಿಕೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಒತ್ತು ನೀಡುವ ಅಗತ್ಯ ಇದೆ ಎಂದು ಈ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಐಸಿಆರ್​ಎ, ಈ ಬಾರಿಯ ಬಜೆಟ್​ನಲ್ಲಿ ವಿದ್ಯುತ್​ ಹಂಚಿಕೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು. ಈ ಮೂಲಕ ವಿದ್ಯುತ್​ ವಿತರಣಾ ವಿಭಾಗದ ಆರ್ಥಿಕತೆಯನ್ನು ಸುಧಾರಿಸಬೇಕಿದೆ. ನವೀಕರಿಸಬಹುದಾದ ವಿದ್ಯುತ್​ ಸಾಮರ್ಥ್ಯದ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ನಿಧಿ ಲಭ್ಯತೆಯನ್ನು ಹೆಚ್ಚಿಸಬೇಕು ಮತ್ತು ಭೂಸ್ವಾಧೀನ ಸವಾಲುಗಳನ್ನು ಸರಾಗಗೊಳಿಸುವ ಸಲುವಾಗಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನೆಯ ಮೇಲೆ ಸೋಲಾರ್​ ಅಳವಡಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದೆ.

ನವೀಕರಿಸಬಹುದಾದ ವಿದ್ಯುತ್​ ಯೋಜನೆಯತ್ತ ಸರ್ಕಾರ ಗಮನಹರಿಸಬೇಕಿದೆ. ಇದಕ್ಕಾಗಿ ದೀರ್ಘಾವಧಿ ಪಾಲಿಸಿಗಳನ್ನು ಸರ್ಕಾರ ಜಾರಿಗೊಳಿಸಲು ಒತ್ತು ನೀಡಬೇಕು. ಇದರಿಂದ ವಿದ್ಯುತ್​ ಕೇಂದ್ರದ ಅಭಿವೃದ್ಧ ಸಾಧ್ಯ ಎಂದು ಐಸಿಆರ್​ಎ ತಜ್ಞರು ಒತ್ತಾಯಿಸಿದ್ದಾರೆ.

ವಿದ್ಯುತ್​ ಕ್ಷೇತ್ರ ನಿಧಾನವಾಗಿ ಕೊರೊನಾದಿಂದ ಚೇತರಿಕೆ ಕಾಣುತ್ತಿದೆ. ಹೀಗಾಗಿ, 2021-22ನೇ ಬಜೆಟ್​ನಲ್ಲಿ ಈಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಹೊಸ ರೀತಿಯ ಯೋಜನೆಗೆ ಆದ್ಯತೆ ನೀಡುವಂತೆ ಆಗಬೇಕು. ಅದರಲ್ಲೂ, ವಿತರಣೆ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಸಿಗಬೇಕಿದೆ. ವಿದ್ಯುತ್​ ಹಂಚಿಕೆಗೆ ಬಲ ಸಿಕ್ಕರೆ, ಪೂರೈಕೆ ಪ್ರಮಾಣ ಹೆಚ್ಚಲಿದೆ. ಇದರಿಂದ ನಾವು ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Budget 2021 | ಸುಲಭದ ಗೃಹ ಸಾಲ, ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ವಲಯ