ಪ್ರಜಾಕೀಯಕ್ಕೆ ವಿಜಯ.. ದಾವಣಗೆರೆ ಜಿಲ್ಲೆಯ ಗ್ರಾಮಕ್ಕೆ ಭೇಟಿ ನೀಡಿ, ಜನರಿಗೆ ಕೃತಜ್ಞತೆ ಸಲ್ಲಿಸಿದ ಉಪೇಂದ್ರ

| Updated By: ಸಾಧು ಶ್ರೀನಾಥ್​

Updated on: Jan 12, 2021 | 2:41 PM

ಉಪೇಂದ್ರ ಇಂದು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಗೆ ಭೇಟಿ ನೀಡಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಅರೇಹಳ್ಳಿ ‌ಜನತೆ ಉಪೇಂದ್ರಗೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.

ಪ್ರಜಾಕೀಯಕ್ಕೆ ವಿಜಯ.. ದಾವಣಗೆರೆ ಜಿಲ್ಲೆಯ ಗ್ರಾಮಕ್ಕೆ ಭೇಟಿ ನೀಡಿ, ಜನರಿಗೆ ಕೃತಜ್ಞತೆ ಸಲ್ಲಿಸಿದ ಉಪೇಂದ್ರ
ಅರೇಹಳ್ಳಿಗೆ ಭೇಟಿ ನೀಡಿದ ಉಪೇಂದ್ರ
Follow us on

ದಾವಣಗೆರೆ: ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಇಂದು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಗೆ ಭೇಟಿ ನೀಡಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಅರೇಹಳ್ಳಿ ‌ಜನತೆ ಉಪೇಂದ್ರಗೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಉಪೇಂದ್ರನನ್ನು ನೋಡಲು ಜನರು ಮುಗಿಬಿದ್ದಿದ್ರು.

ಪ್ರಜಾಕೀಯ ಪಕ್ಷದ ಬೆಂಬಲಿಗ ಚೇತನಕುಮಾರ ನಾಯ್ಕ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಉಪೇಂದ್ರ ಅರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಭಾಷಣ ಮಾಡಿದ್ರು.

ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ “ಪ್ರಜಾಕೀಯ ಪಕ್ಷವನ್ನು ಗೆಲ್ಲಿಸಿ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ಎಲ್ಲಾ ಹಳ್ಳಿಗೂ ನಿಮ್ಮ ಮಾದರಿಯನ್ನು ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವೆ ಮಾಡೆಲ್. ನೀವು ಗೆಲ್ಲಿಸಿರುವ ಅಭ್ಯರ್ಥಿ ಪ್ರಭುವಲ್ಲ.. ಅವನು‌ ಕೆಲಸಗಾರ. ಕರ್ನಾಟಕಕ್ಕೆ ನಿಮ್ಮ ಹಳ್ಳಿ ಸ್ಪೂರ್ತಿಯಾಗಿದೆ ಎಂದು ಹಳ್ಳಿ ಜನರನ್ನು ಹಾಡಿ ಹೊಗಳಿದ್ರು.

ತೆಲುಗು ಚಿತ್ರದಲ್ಲಿ ಜ್ಯೂ.ಎನ್​ಟಿಆರ್​ ಜತೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಉಪೇಂದ್ರ?