ಕಾಡು ಗ್ರಾಮದಲ್ಲಿ DC ಗ್ರಾಮವಾಸ್ತವ್ಯ, ಕುಂದುಕೊರತೆ ಬಿಚ್ಚಿಟ್ಟ ಗ್ರಾಮಸ್ಥರು
ಕಾರವಾರ: ಅದು ದಟ್ಟ ಅಡವಿ ಮಧ್ಯದ ಗ್ರಾಮ. ಸಂಪರ್ಕವೇ ಇಲ್ಲದ ಗ್ರಾಮದಲ್ಲಿ ಜನ ಮೂಲಸೌಕರ್ಯಕ್ಕೆ ಪರದಾಡುತ್ತಿದ್ದಾರೆ. ಆದ್ರೆ ಇದೀಗ ಅವರ ಕಷ್ಟಗಳು ಬಗೆಹರಿಯುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆಲ್ಲಾ ಕಾರಣವಾಗಿರೋದು, ಜಿಲ್ಲಾಧಿಕಾರಿ. ಅಷ್ಟಕ್ಕೂ ದಶಕಗಳ ಸಮಸ್ಯೆಗೆ ಜಿಲ್ಲಾಧಿಕಾರಿ ಕಂಡುಕೊಂಡ ಉತ್ತರವಾದ್ರೂ ಏನು ಅನ್ನೋದಾದ್ರೆ? ಒಂದೆಡೆ ದಟ್ಟ ಅಡವಿ ನಡುವೆ ಪುಟ್ಟ ಗ್ರಾಮ, ಮತ್ತೊಂದೆಡೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಮೇದನಿ ಅನ್ನುವ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಆಗಮಿಸಿರೋದು […]
ಕಾರವಾರ: ಅದು ದಟ್ಟ ಅಡವಿ ಮಧ್ಯದ ಗ್ರಾಮ. ಸಂಪರ್ಕವೇ ಇಲ್ಲದ ಗ್ರಾಮದಲ್ಲಿ ಜನ ಮೂಲಸೌಕರ್ಯಕ್ಕೆ ಪರದಾಡುತ್ತಿದ್ದಾರೆ. ಆದ್ರೆ ಇದೀಗ ಅವರ ಕಷ್ಟಗಳು ಬಗೆಹರಿಯುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆಲ್ಲಾ ಕಾರಣವಾಗಿರೋದು, ಜಿಲ್ಲಾಧಿಕಾರಿ. ಅಷ್ಟಕ್ಕೂ ದಶಕಗಳ ಸಮಸ್ಯೆಗೆ ಜಿಲ್ಲಾಧಿಕಾರಿ ಕಂಡುಕೊಂಡ ಉತ್ತರವಾದ್ರೂ ಏನು ಅನ್ನೋದಾದ್ರೆ?
ಒಂದೆಡೆ ದಟ್ಟ ಅಡವಿ ನಡುವೆ ಪುಟ್ಟ ಗ್ರಾಮ, ಮತ್ತೊಂದೆಡೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಮೇದನಿ ಅನ್ನುವ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಆಗಮಿಸಿರೋದು ಈ ಎಲ್ಲಾ ಸಂಭ್ರಮಕ್ಕೆ ಕಾರಣವಾಗಿತ್ತು. ಮೇದನಿ ಗ್ರಾಮ ಕುಮಟಾ ತಾಲೂಕಿನಿಂದ ಸುಮಾರು 43 ಕಿಲೋ ಮೀಟರ್ ದೂರದಲ್ಲಿದೆ. ಗುಡ್ಡದ ಮೇಲಿರುವ ಮೇದನಿ ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ಜೀವನ ಸಾಗಿಸುತ್ತಿದ್ದು ರಸ್ತೆ ಸಂಪರ್ಕ, ಸೇರಿದಂತೆ ಮೂಲ ಸೌಕರ್ಯ ಗ್ರಾಮಸ್ಥರು ಹಲವಾರು ವರ್ಷದಿಂದ ಪರದಾಟ ನಡೆಸುತ್ತಿದ್ದರು.
ಇನ್ನು ಗ್ರಾಮದ ಜನರ ಸಮಸ್ಯೆಯ ಬಗ್ಗೆ ತಿಳಿದ ಉತ್ತರ ಕನ್ನಡ ಡಿಸಿ ಡಾ. ಹರೀಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ರೋಷನ್ ಗ್ರಾಮದಲ್ಲಿ ವಾಸ್ತವ್ಯ ಮಾಡಲು ಆಗಮಿಸಿದ್ದರು. ಅಧಿಕಾರಿಗಳ ತಂಡದ ಜೊತೆಗೆ ಆಗಮಿಸಿದ ಜಿಲ್ಲಾಧಿಕಾರಿ, ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು. ಅಲ್ಲದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ರಾತ್ರಿ ವಾಸ್ತವ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾದ್ರು.
ಮೇದನಿ ಗ್ರಾಮಕ್ಕೆ ಅಧಿಕಾರಿಗಳ ಆಗಮನ ಹಿನ್ನೆಲೆ ಮಣ್ಣಿನ ರಸ್ತೆಯನ್ನ ಮಾಡಿ ರಸ್ತೆಯನ್ನ ಸರಿಪಡಿಸಲಾಗಿದೆ. ಇದುವರೆಗೂ ಗ್ರಾಮಕ್ಕೆ ಒಂದು ಕಾರು ಸಹ ಆಗಮಿಸಿರಲಿಲ್ಲ. ಮಣ್ಣಿನ ರಸ್ತೆ ಆಗಿದ್ದರಿಂದ ನಾಲ್ಕು ಚಕ್ರದ ವಾಹನಗಳು ಗ್ರಾಮಕ್ಕೆ ಬರುವಂತಾಗಿದ್ದು ಗ್ರಾಮಕ್ಕೆ ಸಿಮೆಂಟ್ ರಸ್ತೆ ಮಾಡುವ ಮೂಲಕ ಶಾಶ್ವತ ಪರಿಹಾರ ಕೊಡಿಸಿ ಅನ್ನೋದು ಗ್ರಾಮಸ್ಥರ ಮೊದಲ ಆಗ್ರಹವಾಗಿತ್ತು. ಒಟ್ನಲ್ಲಿ ಡಿಸಿ ಗ್ರಾಮಕ್ಕೆ ವಿಸಿಟ್ ಕೊಟ್ಟಿರೋದ್ರಿಂದ ಸಾಕಷ್ಟು ಲಾಭವಾಗಿದೆ. ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಜನ ಅಹವಾಲು ನೀಡಿದ್ದು, ಸಮಸ್ಯೆ ಬಗೆಹರಿಯುವ ಹಂತದಲ್ಲಿದೆ.
Published On - 1:53 pm, Mon, 6 January 20