ಕೊಪ್ಪಳ: ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ ಪಕ್ಕದ ಕೊಠಡಿಯಲ್ಲಿಯೇ ಇನ್ಸ್ಟಾಲ್ ಮಾಡದ ಹತ್ತಾರು ವೆಂಟಿಲೇಟರ್ಗಳು ಅನಾಥವಾಗಿ ಬಿದ್ದಿವೆ. ಕೊರೊನಾ ಚಿಕಿತ್ಸೆಯಲ್ಲಿ ಅತ್ಯಮೂಲ್ಯ ಪಾತ್ರ ನಿರ್ವಹಿಸುವ ವೆಂಟಿಲೇಟರ್ಗಳು ಇದ್ದರೂ ಅವುಗಳನ್ನು ಇನ್ಸ್ಟಾಲ್ ಮಾಡದೇ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ ಇರದ ಕಾರಣ ಹೀಗೆ ಇನ್ಸ್ಟಾಲ್ ಆಗದೇ ಅನಾಥವಾಗಿವೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ. ಕೋವಿಡ್ ವಾರ್ಡ್ ಪಕ್ಕದಲ್ಲಿಯೇ ಈ ವೆಂಟಿಲೇಟರ್ಗಳು ಬಿದ್ದಿವೆ. ಗಮನಾರ್ಹವೆಂದರೆ ಜಿಲ್ಲೆಯಲ್ಲಿ ಒಂದು ವಾರದಲ್ಲಿ 30 ಕ್ಕೂ ಹೆಚ್ಚು ಜಾನ ಸಾವನ್ನಪ್ಪಿದ್ರೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ನಿಜಕ್ಕೂ ಆಘಾತಕಾರಿಯಾಗಿದೆ.
ವೆಂಟಿಲೇಟರ್ ಕೊರತೆಯೇ ಈ ಸಾವುಗಳಿಗೆ ಕಾರಣ ಅನ್ನೋ ಮಾಹಿತಿಯೂ ಇದೆ. ಇಂತಹ ಗಂಭೀರವಾದ ಆರೋಪದ ನಡುವೆಯೂ ವೆಂಟಿಲೇಟರ್ ಇದ್ರೂ ಇನ್ಸ್ಟಾಲ್ ಮಾಡದ ಆರೋಗ್ಯ ಇಲಾಖೆಗೆ ಬುದ್ಧಿ ಹೇಳುವವರು ಯಾರು? ಎಂದು ಜಿಲ್ಲೆಯ ಜನ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
Published On - 9:49 am, Mon, 31 August 20