ಉದ್ಯಮಿ ರತನ್ ಟಾಟಾಗೆ ಭಾರತ-ಇಸ್ರೇಲ್ ವಾಣಿಜ್ಯ ಮಂಡಳಿಯಿಂದ ಗೌರವ

| Updated By: ganapathi bhat

Updated on: Apr 06, 2022 | 11:33 PM

ಭಾರತ, ಇಸ್ರೇಲ್​ ಮತ್ತು ಪ್ಯಾಲೆಸ್ತನ್ ನಡುವೆ ಉತ್ತಮ ಸಂಬಂಧಕ್ಕೆ ಅವರು ಕಾರಣರಾಗಿದ್ದಾರೆ. ಈ ಗೌರವಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಇಸ್ರೇಲ್-ಭಾರತದ ವಾಣಿಜ್ಯ ಮಂಡಳಿಯ ಅಧ್ಯಕ್ಷ ರವಿವ್ ಬೈರೊನ್ ತಿಳಿಸಿದ್ದಾರೆ.

ಉದ್ಯಮಿ ರತನ್ ಟಾಟಾಗೆ ಭಾರತ-ಇಸ್ರೇಲ್ ವಾಣಿಜ್ಯ ಮಂಡಳಿಯಿಂದ ಗೌರವ
ರತನ್ ಟಾಟಾ (ಸಂಗ್ರಹ ಚಿತ್ರ)
Follow us on

ದೆಹಲಿ: ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿ ಸಾಧಿಸುವ ನೆಲೆಯಲ್ಲಿ ಹೊಸ ಆವಿಷ್ಕಾರಗಳನ್ನು ಬೆಂಬಲಿಸಿದೆ ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾಗೆ ಇಂಡೋ-ಇಸ್ರೇಲ್ ವಾಣಿಜ್ಯ ಮಂಡಳಿ ‘ಗ್ಲೋಬಲ್ ವಿಷನರಿ ಆಫ್ ಸಸ್ಟೈನೆಬಲ್ ಬ್ಯುಸಿನೆಸ್ ಅಂಡ್ ಪೀಸ್’ ಪ್ರಶಸ್ತಿ ನೀಡಿ ಗೌರವಿಸಲಿದೆ. ರತನ್ ಟಾಟಾ ಒಡೆತನದ ಟಾಟಾ ಗ್ರೂಪ್​ಗೆ ಡಿ.21ರಂದು ದುಬೈನಲ್ಲಿ ನಡೆಯುವ ವರ್ಚುಯಲ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಲಭಿಸಲಿದೆ.

ಕಾರ್ಯಕ್ರಮದಲ್ಲಿ ಭಾರತ, ಇಸ್ರೇಲ್ ಮತ್ತು ಯುಎಇನ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ರತನ್ ಟಾಟಾ ಕೆಲವಾರು ಬಾರಿ ಇಸ್ರೇಲ್​ಗೆ ಭೇಟಿ ನೀಡಿದ್ದಾರೆ. ಭಾರತ, ಇಸ್ರೇಲ್​ ಮತ್ತು ಪ್ಯಾಲೆಸ್ತೇನಿನ ಉತ್ತಮ ಸಂಬಂಧಕ್ಕೆ ಅವರು ಕಾರಣರಾಗಿದ್ದಾರೆ. ಈ ಗೌರವಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಇಸ್ರೇಲ್-ಭಾರತದ ವಾಣಿಜ್ಯ ಮಂಡಳಿಯ ಅಧ್ಯಕ್ಷ ರವಿವ್ ಬೈರೊನ್ ತಿಳಿಸಿದ್ದಾರೆ.

ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾವಹಾರಿಕ ಸಂಬಂಧವನ್ನು ಬಲಗೊಳಿಸುವಲ್ಲಿ ಈ ಸಮಾರಂಭವು ಪ್ರಮುಖ ಪಾತ್ರ ವಹಿಸಲಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪಡೆದಿರುವ 82ರ ಹರೆಯದ ರತನ್ ಟಾಟಾ ಈ ಕಾರ್ಯಕ್ರಮದಲ್ಲಿ ಗೌರವ ಪಡೆಯಲಿದ್ದಾರೆ.

ಯುಎಇ ಮತ್ತು ಬಹ್ರೇನ್ ದೇಶಗಳಲ್ಲಿ ಹಲವಾರು ಭಾರತೀಯರಿದ್ದಾರೆ. ಉನ್ನತ ಹುದ್ದೆ ಮತ್ತು ಉತ್ತಮ ಗೌರವವನ್ನೂ ಅವರು ಸಂಪಾದಿಸಿದ್ದಾರೆ. ಆದ್ದರಿಂದ, ಗಲ್ಫ್, ಭಾರತ ಮತ್ತು ಇಸ್ರೇಲ್​ನ ಸಂಬಂಧ ಬಲಪಡಿಸುವ ನಿಟ್ಟಿನಲ್ಲೂ ನಾವು ಶ್ರಮಿಸಬಹುದು ಎಂದು ರವಿವ್ ಬೈರೊನ್ ಹೇಳಿದ್ದಾರೆ.

Published On - 7:49 pm, Fri, 18 December 20