ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆ ಬಯಲು, ಮಾತ್ರೆಗಳನ್ನೇ ಕೊಡದೆ ವೈದ್ಯರ ನಿರ್ಲಕ್ಷ್ಯ!
ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್ ಸಿಟಿ, ಐಟಿ ಸಿಟಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಬೆಂಗಳೂರಿನ ಪರಿಸ್ಥಿತಿ ಯಾರು ಊಹಿಸಲಾಗದಷ್ಟು ಹೀನಾಯವಾಗಿದೆ. ಕೊರೊನಾ ಕಾಲಿಟ್ಟಾಗಿನಿಂದ ಜನ ನರಕ ಅನುಭವಿಸುತ್ತಿದ್ದಾರೆ. ಸಾವು-ನೋವಿನಲ್ಲಿ ಬೆಂದಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕೊವಿಡ್ ಆಸ್ಪತ್ರೆಗಳ ಅವ್ಯವಸ್ಥೆ ಬಯಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ನರಕ ದರ್ಶನದ ಆಡಿಯೋ ಲಭಿಸಿದೆ. ಟಿವಿ9 ಜತೆ ಮಾತಾಡಿದ ಯುವತಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಮಾತ್ರೆಗಳನ್ನೇ ಕೊಡುತ್ತಿಲ್ಲವಂತೆ. ಒಂದು ಟ್ಯಾಬ್ಲೆಟ್ ತಗೋಬೇಕು ಅಂದ್ರೆ 20 ಸಾರಿ ಅಲೀಬೇಕು. […]
ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್ ಸಿಟಿ, ಐಟಿ ಸಿಟಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಬೆಂಗಳೂರಿನ ಪರಿಸ್ಥಿತಿ ಯಾರು ಊಹಿಸಲಾಗದಷ್ಟು ಹೀನಾಯವಾಗಿದೆ. ಕೊರೊನಾ ಕಾಲಿಟ್ಟಾಗಿನಿಂದ ಜನ ನರಕ ಅನುಭವಿಸುತ್ತಿದ್ದಾರೆ. ಸಾವು-ನೋವಿನಲ್ಲಿ ಬೆಂದಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕೊವಿಡ್ ಆಸ್ಪತ್ರೆಗಳ ಅವ್ಯವಸ್ಥೆ ಬಯಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ನರಕ ದರ್ಶನದ ಆಡಿಯೋ ಲಭಿಸಿದೆ. ಟಿವಿ9 ಜತೆ ಮಾತಾಡಿದ ಯುವತಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಮಾತ್ರೆಗಳನ್ನೇ ಕೊಡುತ್ತಿಲ್ಲವಂತೆ. ಒಂದು ಟ್ಯಾಬ್ಲೆಟ್ ತಗೋಬೇಕು ಅಂದ್ರೆ 20 ಸಾರಿ ಅಲೀಬೇಕು. 20 ಸಾರಿ 5ನೇ ಫ್ಲೋರ್ವರೆಗೂ ಹೋಗಿ ಬರಬೇಕಾದ ಸ್ಥಿತಿ ಇದೆ.
ಡಾಕ್ಟರ್ಗಳು ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡೋದಿಲ್ಲ. ಕೆಲವರು ಒಂದೊಂದು ತಿಂಗಳು, ಎರಡೆರಡು ತಿಂಗಳಿಂದ ಆಸ್ಪತ್ರೆಯಲ್ಲಿದ್ದಾರೆ. ಒಬ್ಬೊಬ್ಬರಿಗೆ ಐದೈದು ಸಾರಿ ಕೊವಿಡ್ ಟೆಸ್ಟ್ ಮಾಡಿದ್ದಾರೆ. ಆದ್ರೆ ಯಾರಿಗೂ ಕೊವಿಡ್ ಟೆಸ್ಟ್ ರಿಸಲ್ಟ್ಗಳನ್ನೇ ಕೊಡ್ತಿಲ್ಲ. ರೋಗಿಗಳಿಗೆ ನೆಗೆಟಿವ್ ಬಂದ್ರೂ ಡಿಸ್ಚಾರ್ಜ್ ಮಾಡೋದಿಲ್ಲ. ನೆಗೆಟಿವ್ ಬಂದವರನ್ನೂ ಸೋಂಕಿತರ ವಾರ್ಡ್ನಲ್ಲೇ ಇಟ್ಟಿದ್ದಾರೆ. ನಾವು ಕೊರೊನಾಗಿಂತ ಹಸಿವಿನಿಂದಲೇ ಸಾಯುತ್ತೇವೆ ಎಂದು ಮಹಿಳೆ ಅಳಲನ್ನು ತೋಡಿಕೊಂಡಿದ್ದಾರೆ.
ನಮ್ಮನ್ನ ಇಲ್ಲೇ ಇರಿಸ್ಕೊಂಡ್ರೆ ವಾಸಿಯಾಗಿದ್ರೂ ಮತ್ತೆ ಕಾಯಿಲೆ ಬರುತ್ತೆ ಅನ್ನೋ ಆತಂಕ ಇದೆ. ನಮ್ಮನ್ನ ಡಿಸ್ಚಾರ್ಜ್ ಮಾಡಿದ್ರೆ ಬೇರೆಯವರಿಗಾದ್ರೂ ಬೆಡ್ ಸಿಗುತ್ತೆ. ಹೊಸಬರಿಗೆ ಟ್ರೀಟ್ ಮೆಂಟ್ ಕೊಡೋಕ್ ಆಗದೇ ಇಲ್ಲೇ ನಮ್ಮನ್ನ ಇರಿಸಿಕೊಂಡಿದ್ದಾರೆ ಅನ್ನಿಸ್ತಿದೆ. ದಯಮಾಡಿ ನಮಗೆ ಏನಾದ್ರು ಸಹಾಯ ಮಾಡೋ ರೀತಿ ಮಾಡಿ ಅಂತ ಅಂಗಲಾಚಿ ಬೇಡಿಕೊಂಡಿದ್ದಾರೆ. ಅಜ್ಜಿ, ಮಗು, ಯುವಕರನ್ನು ಒಂದೇ ಕೊಠಡಿಗೆ ಹಾಕಿದ್ದಾರೆ. ಮಕ್ಕಳಿಗೆ ಹಾಲು ಕೂಡ ಕೊಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
Published On - 9:01 am, Tue, 23 June 20