ಸಿಎಂ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ, ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಜನಜಂಗುಳಿ
ಬೆಂಗಳೂರು: ನಗರದಲ್ಲಿ ದಿನೇದಿನೆ ಕೊರೊನಾ ಕೇಸ್ಗಳು ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲು ಬಿಬಿಎಂಪಿ ಮುಂದಾಗಿತ್ತು. ನಿನ್ನೆ ಸಿಎಂ ಜೊತೆ ನಡೆದ ಸಭೆಯಲ್ಲಿ ಪ್ರಮುಖ ನಾಲ್ಕು ಏರಿಯಾಗಳನ್ನು ಸೀಲ್ಡೌನ್ ಮಾಡಲು ಸೂಚಿಸಲಾಗಿತ್ತು. ಆದ್ರೆ ಕೆ.ಆರ್.ಮಾರುಕಟ್ಟೆಯಲ್ಲಿ ಸೀಲ್ಡೌನ್ಗೆ ಕ್ಯಾರೇ ಅಂತಿಲ್ಲ ಜನ. ಎಲ್ಲಿ ನೋಡಿದ್ರೂ ಜನವೋ ಜನ ಕಂಡು ಬರ್ತಿದ್ದಾರೆ. ಬೆಳ್ಳಂಬೆಳಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೂ, ತರಕಾರಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಸೀಲ್ಡೌನ್ ಆದೇಶವಿದ್ದರೂ ಮಾರ್ಕೆಟ್‌ನಲ್ಲಿ ಜನ ಜಾತ್ರೆ ಕಂಡು ಬಂದಿದೆ. ಇನ್ನು ಕಲಾಸಿಪಾಳ್ಯ ಮಾರ್ಕೆಟ್ನಲ್ಲೂ […]
ಬೆಂಗಳೂರು: ನಗರದಲ್ಲಿ ದಿನೇದಿನೆ ಕೊರೊನಾ ಕೇಸ್ಗಳು ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲು ಬಿಬಿಎಂಪಿ ಮುಂದಾಗಿತ್ತು. ನಿನ್ನೆ ಸಿಎಂ ಜೊತೆ ನಡೆದ ಸಭೆಯಲ್ಲಿ ಪ್ರಮುಖ ನಾಲ್ಕು ಏರಿಯಾಗಳನ್ನು ಸೀಲ್ಡೌನ್ ಮಾಡಲು ಸೂಚಿಸಲಾಗಿತ್ತು.
ಆದ್ರೆ ಕೆ.ಆರ್.ಮಾರುಕಟ್ಟೆಯಲ್ಲಿ ಸೀಲ್ಡೌನ್ಗೆ ಕ್ಯಾರೇ ಅಂತಿಲ್ಲ ಜನ. ಎಲ್ಲಿ ನೋಡಿದ್ರೂ ಜನವೋ ಜನ ಕಂಡು ಬರ್ತಿದ್ದಾರೆ. ಬೆಳ್ಳಂಬೆಳಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೂ, ತರಕಾರಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಸೀಲ್ಡೌನ್ ಆದೇಶವಿದ್ದರೂ ಮಾರ್ಕೆಟ್‌ನಲ್ಲಿ ಜನ ಜಾತ್ರೆ ಕಂಡು ಬಂದಿದೆ.
ಇನ್ನು ಕಲಾಸಿಪಾಳ್ಯ ಮಾರ್ಕೆಟ್ನಲ್ಲೂ ಇದೇ ಪರಿಸ್ಥಿತಿ. ಎಂದಿನಂತೆ ತರಕಾರಿ ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಕಲಾಸಿಪಾಳ್ಯ ಭಾಗದಲ್ಲಿ 20ಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿವೆ. ದೈಹಿಕ ಅಂತರ ಇಲ್ಲದೆ ಜನರಿಂದ ಹೂ, ತರಕಾರಿ ಖರೀದಿಯಾಗುತ್ತಿದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತಿದೆ. ಇದನ್ನು ನೋಡಿದ್ರೆ ಸೀಲ್ಡೌನ್- ಲಾಕ್ಡೌನ್ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕ್ತಿರೋದೆಕೆ? ಈಗಾಗಲೇ 20 ಕ್ಕು ಹೆಚ್ಚು ಕೇಸ್ಗಳು ಇರೂ ಭಾಗದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರಿಸುತ್ತಿರೋದ್ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಕಲಾಸಿಪಾಳ್ಯ ಕೊನೆಗೂ ಸೀಲ್ಡೌನ್: ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ಎಚ್ಚೆತ್ತ ಅಧಿಕಾರಿಗಳು ಕೆ.ಆರ್.ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರನ್ನು ತೆರವು ಮಾಡಿದ್ದಾರೆ. ಮಾರ್ಕೆಟ್‌ನ ಮುಖ್ಯರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಮಾರುಕಟ್ಟೆಯ ಪ್ರತಿ ಅಂಗಡಿಗೆ ತೆರಳಿ ಬಾಗಿಲು ಹಾಕುವಂತೆ ತಿಳಿಸಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಮಾರುಕಟ್ಟೆ ಅಂಗಳವನ್ನ ಗುಡಿಸಿ ಸ್ವಚ್ಛ ಮಾಡುತ್ತಿದ್ದಾರೆ. ಹಾಗೂ ಕಲಾಸಿಪಾಳ್ಯವನ್ನು ಬ್ಯಾರಿಕೇಡ್ ಹಾಕಿ ಸೀಲ್ಡೌನ್ ಮಾಡಿದ್ದಾರೆ.
Published On - 8:07 am, Tue, 23 June 20