
ಕೊಡಗು: ದೇಶದ ವಿಚಾರದಲ್ಲಿ ನಿಂತಲ್ಲಿಯೆ ಪ್ರಾಣ ನೀಡಲು ಹಿಂಜರಿಯದ ಭಾರತೀಯ ಯೋಧರೆಂದರೆ ಇಡೀ ವಿಶ್ವವೇ ಎದ್ದು ನಿಂತು ಸಲಾಮ್ ಹೊಡೆಯುತ್ತದೆ. ಈಗ ಅದೇ ಕೊಡಗಿನ ಯೋಧನೊಬ್ಬ ಭಾರತದ ಗಡಿಯಲ್ಲಿ ನಿಂತು ಮಾಡಿರುವ ವಿಡಿಯೋ ಒಂದು ಫುಲ್ ವೈರಲ್ ಆಗಿದೆ.
ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ಯೋಧನೊಬ್ಬ ಭಾರತದ ಗಡಿಯಾದ LOC ಬಳಿ ನಿಂತು ವೀಡಿಯೋ ಒಂದನ್ನು ಮಾಡಿದ್ದಾನೆ. ವಿಡಿಯೋದಲ್ಲಿ ತಾನೂ ಗಡಿಯಲ್ಲಿ ಬಾಂಬ್ ಪತ್ತೆ ದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದೇನೆ ಎಂದು ಯೋಧ ತಾನಿರುವ ಜಾಗದ ಚಿತ್ರಣ ಕಟ್ಟಿಕೊಟ್ಟಿದ್ದಾನೆ.
ಇನ್ನು ಪಾಕಿಸ್ತಾದ ಗಡಿಗೆ ಹತ್ತಿರ ಇರುವ ಈ LOC ಬಳಿ ತಾನು ಕರ್ತವ್ಯ ನಿರ್ವಹಿಸಲು ತೆರಳುತ್ತಿರುವುದಾಗಿ ಹೇಳಿರುವ ಯೋಧ, ಈ ಹಿಂದೆ ಆ ಜಾಗದಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದ ಇಬ್ಬರು ಸೈನಿಕರು ಆಯತಪ್ಪಿ ಪಾಕಿಸ್ತಾನದ ಗಡಿಯೊಳಗೆ ಬಿದ್ದಿದ್ದರಿಂದ ಪಾಕ್ ಸೈನಿಕರು, ನಮ್ಮ ಸೈನಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾಗಿ ವಿಷಾದದಿಂದ ಹೇಳಿದ್ದಾನೆ.
ಇಂತಹ ಜಾಗಕ್ಕೆ ತೆರಳುತ್ತಿರುವ ನಾನು.. ಮತ್ತೆ ಜೀವಂತವಾಗಿ ವಾಪಾಸ್ ಬರುತ್ತೇನೊ, ಇಲ್ಲವೋ ತಿಳಿದಿಲ್ಲ. ಆದರೆ ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ಇದ್ದರೆ ಖಂಡಿತವಾಗಿಯೂ ಸುರಕ್ಷಿತವಾಗಿ ವಾಪಾಸ್ ಬರುತ್ತೇನೆ ಎಂದು ಕೆಚ್ಚೆದೆಯಿಂದ ಹೇಳಿದ್ದಾನೆ. ಈ ಯೋಧನಿಗೆ ನಿಮ್ಮದೊಂದು ಬೇಷರತ್ ಆಶೀರ್ವಾದ ಮತ್ತು ಪ್ರಾರ್ಥನೆ ಇರಲಿ
Published On - 10:57 am, Sat, 5 September 20