ಇದು ಸಂಜನಾ ಗಲ್ರಾನಿ ಕಿರಿಕ್ ಕಹಾನಿ.. ವೀಕೆಂಡಲ್ಲಿ ಮನೆಯೇ ಪಬ್, ನೈಟ್ ಫುಲ್ ಪಾರ್ಟಿ!
ಬೆಂಗಳೂರು: ನಟಿ ರಾಗಿಣಿಯ ಒಂದು ಕಥೆಯಾದರೆ ಇತ್ತ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ನಂಟು ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಹೆಸರು ಸಹ ಕೇಳಿಬಂದಿದೆ. ಈ ನಡುವೆ, ಸಂಜನಾ ನೆರೆಮನೆಯವರು ಮತ್ತು ಸ್ಥಳೀಯರು ನಟಿಯ ಭರ್ಜರಿ ಪಾರ್ಟಿಗಳಿಂದ ಸಂಕಷ್ಟ ಅನುಭವಿಸಿರುವ ಕಥೆಗಳನ್ನು ಹೊರಹಾಕಿದ್ದಾರೆ. ನಟಿಯ ನೈಟ್ ಪಾರ್ಟಿಗಳಿಂದ ನೆರೆಹೊರೆಯವರಿಗೆ ಭಾರಿ ತೊಂದರೆ ಉಂಟಾಗುತ್ತಿತ್ತು ಎಂದು ಸಂಜನಾ ಗಲ್ರಾನಿ ವಿರುದ್ಧ ಸ್ಥಳೀಯರಿಂದ ಆರೋಪ ಕೇಳಿಬಂದಿದೆ. ಇಂದಿರಾನಗರದಲ್ಲಿರುವ ಸಾಯಿತೇಜಾ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಸಂಜನಾ ರಾತ್ರಿ 12 ಗಂಟೆ ಆದರೆ ಅವರ ಮನೆಯಲ್ಲಿ […]
ಬೆಂಗಳೂರು: ನಟಿ ರಾಗಿಣಿಯ ಒಂದು ಕಥೆಯಾದರೆ ಇತ್ತ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ನಂಟು ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಹೆಸರು ಸಹ ಕೇಳಿಬಂದಿದೆ. ಈ ನಡುವೆ, ಸಂಜನಾ ನೆರೆಮನೆಯವರು ಮತ್ತು ಸ್ಥಳೀಯರು ನಟಿಯ ಭರ್ಜರಿ ಪಾರ್ಟಿಗಳಿಂದ ಸಂಕಷ್ಟ ಅನುಭವಿಸಿರುವ ಕಥೆಗಳನ್ನು ಹೊರಹಾಕಿದ್ದಾರೆ.
ನಟಿಯ ನೈಟ್ ಪಾರ್ಟಿಗಳಿಂದ ನೆರೆಹೊರೆಯವರಿಗೆ ಭಾರಿ ತೊಂದರೆ ಉಂಟಾಗುತ್ತಿತ್ತು ಎಂದು ಸಂಜನಾ ಗಲ್ರಾನಿ ವಿರುದ್ಧ ಸ್ಥಳೀಯರಿಂದ ಆರೋಪ ಕೇಳಿಬಂದಿದೆ. ಇಂದಿರಾನಗರದಲ್ಲಿರುವ ಸಾಯಿತೇಜಾ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಸಂಜನಾ ರಾತ್ರಿ 12 ಗಂಟೆ ಆದರೆ ಅವರ ಮನೆಯಲ್ಲಿ ಗಾನಾ ಬಜಾನಾ ಶುರುವಾಗುತ್ತಿತ್ತಂತೆ.
‘ಪ್ರಶ್ನೆ ಮಾಡೋಕೆ ಹೋದಾಗ ಫುಲ್ ಕಿರಿಕ್’ ಸಂಜನಾ ಪಾರ್ಟಿ ಗೋಳು ತಡಿಯೋಕ್ಕಾಗಲ್ಲ ಅಂತಾ ಕೆಲ ಸ್ಥಳೀಯರು ಆಕೆಯನ್ನ ಪ್ರಶ್ನೆ ಮಾಡೋಕೆ ಹೋದಾಗ ಫುಲ್ ಕಿರಿಕ್ ಮಾಡಿದ್ರಂತೆ ಸಂಜನಾ. ಇದಲ್ಲದೆ, ಸಂಜನಾ ಇರುವ ಅಪಾರ್ಟ್ಮೆಂಟ್ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪ ಸಹ ಕೇಳಿಬಂದಿದೆ.
ಇವರ ಪಾರ್ಟಿ ಗಲಾಟೆ ಪ್ರಶ್ನಸಿದ ವಕೀಲರೊಬ್ಬರ ಮೇಲೆ ಸಂಜನಾ ಆಪ್ತ ರಾಹುಲ್ ನಶೆಯಲ್ಲಿ ಹಲ್ಲೆ ಮಾಡಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ, ನಟಿಯ ನೈಟ್ ಪಾರ್ಟಿಗೆ ಬೇಜಾನ್ ಮಂದಿ ಬರ್ತಾರೆ.
ಅಪ್ಪ, ಅಮ್ಮನ ಜೊತೆಯಲ್ಲಿ ಇಲ್ಲ ಸಂಜನಾ! ಅವಳ ಜೊತೆ ಇರೋ ಡಾಕ್ಟರ್ ಯಾರು ಚೆಕ್ ಮಾಡಿ: ಅವಳು ಅಪ್ಪ, ಅಮ್ಮನ ಜೊತೆಯಲ್ಲಿ ಇಲ್ಲ. ಅವಳ ಜೊತೆ ಇರೋ ಡಾಕ್ಟರ್ ಯಾರು ಅಂತಾ ಚೆಕ್ ಮಾಡಿ ಅಂತಾ ಸ್ಥಳೀಯರು ಮಾಹಿತಿ ನೀಡಿದ್ದಾರೆ! ಇದಲ್ಲದೆ, ಸಂಜನಾ ಭಾರಿ ದೊಡ್ಡ ವ್ಯಕ್ತಿ. ಅವಳು ಇರುವ ಮನೆ ಯಾರದ್ದು? ಅವಳು ಯಾರ ಜೊತೆ ಇರ್ತಾಳೆ ಅಂತಾ ಕೇಳಿ? ಅವಳಿಗೆ ಮದುವೆ ಆಗಿದ್ಯಾ? ಅವಳು ಸರಿ ಇಲ್ಲ ಎಂದು ಸ್ಥಳೀಯರು ಹತ್ತು ಹಲವಾರು ಪ್ರಶ್ನೆ ಕೇಳಿದ್ದಾರೆ.
ಅಷ್ಟೇ ಅಲ್ಲದೆ, ಸಂಜನಾ ಮನೆಗೆ ಒಮ್ಮೆ ಜಲ್ಲಿ ಮತ್ತು ಮರಳು ಹಾಕಿದ್ದ ಟ್ರ್ಯಾಕ್ಟರ್ ಹುಡುಗನಿಗೂ ಸಹ ಥಳಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಆ ಹುಡುಗ ಹಣ ಕೇಳಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದಿದ್ದು ಆ ಹುಡುಗ ಕೂಡ ಸಂಜನಾಗೆ ಚಪ್ಪಲಿಯಲ್ಲಿ ಹೊಡೆದಿದ್ದನಂತೆ ಎಂದು ಸ್ಥಳೀಯರು ನಡೆದ ಘಟನೆ ವಿವರಿಸಿದರು.
Published On - 11:36 am, Sat, 5 September 20