ತುಪ್ಪದ ರಾಣಿಗಾಗಿ ಬಾಯ್ಫ್ರೆಂಡ್ಸ್ನಿಂದ ‘ನಾಟಿಕೋಳಿ’ ಜಗಳ!
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕಾಟನ್ಪೇಟೆ ಠಾಣೆಯಲ್ಲಿ CCB ಅಧಿಕಾರಿಗಳು ದಾಖಲಿಸಿರುವ FIRನಲ್ಲಿ ನಟಿ ರಾಗಿಣಿ ದ್ವಿವೇದಿ ಮೊದಲ ಬಾಯ್ಫ್ರೆಂಡ್ ಶಿವಪ್ರಕಾಶ್ ಹೆಸರು ಸಹ ಉಲ್ಲೇಖಿಸಲಾಗಿದೆ. ರಾಗಿಣಿಯ ಐಶಾರಾಮಿ ಜೀವನಕ್ಕೆ ಸಾಥ್ ಕೊಟ್ಟಿದ್ದ ಶಿವಪ್ರಕಾಶ್ ಆಕೆಗಾಗಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಕೇವಲ ಪಾರ್ಟಿ ಆಯೋಜನೆ ಮಾಡವುದೇ ಅಲ್ಲ ಶಿವಪ್ರಕಾಶ್ ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದನಂತೆ. ರಾಗಿಣಿಗಾಗಿ ಸಿನಿಮಾ ನಿರ್ಮಾಪಕನಾದ ಈ ಲವ್ವರ್ ಬಾಯ್ ಆಕೆಗಾಗಿ ನಾಟಿಕೋಳಿ ಎಂಬ ಸಿನಿಮಾ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕಾಟನ್ಪೇಟೆ ಠಾಣೆಯಲ್ಲಿ CCB ಅಧಿಕಾರಿಗಳು ದಾಖಲಿಸಿರುವ FIRನಲ್ಲಿ ನಟಿ ರಾಗಿಣಿ ದ್ವಿವೇದಿ ಮೊದಲ ಬಾಯ್ಫ್ರೆಂಡ್ ಶಿವಪ್ರಕಾಶ್ ಹೆಸರು ಸಹ ಉಲ್ಲೇಖಿಸಲಾಗಿದೆ.
ರಾಗಿಣಿಯ ಐಶಾರಾಮಿ ಜೀವನಕ್ಕೆ ಸಾಥ್ ಕೊಟ್ಟಿದ್ದ ಶಿವಪ್ರಕಾಶ್ ಆಕೆಗಾಗಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಕೇವಲ ಪಾರ್ಟಿ ಆಯೋಜನೆ ಮಾಡವುದೇ ಅಲ್ಲ ಶಿವಪ್ರಕಾಶ್ ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದನಂತೆ.
ರಾಗಿಣಿಗಾಗಿ ಸಿನಿಮಾ ನಿರ್ಮಾಪಕನಾದ ಈ ಲವ್ವರ್ ಬಾಯ್ ಆಕೆಗಾಗಿ ನಾಟಿಕೋಳಿ ಎಂಬ ಸಿನಿಮಾ ಸಹ ನಿರ್ಮಾಣ ಮಾಡಿದ್ದ.
ನಾಟಿಕೋಳಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಾಗಿಣಿಯ ಚಿತ್ರಕ್ಕೆ ತಾನೇ ಹಣ ಹೂಡಿಕೆ ಮಾಡಿದ್ದ. ಆಗ, ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಪ್ರಕಾಶ್ ಹಾಗೂ ರವಿಶಂಕರ್ ನಡುವೆ ಕಿತ್ತಾಟ ನಡೆದು ಆಗ ದೊಡ್ಡ ರಾದ್ಧಾಂತ ಸಹ ಆಗಿತ್ತು.
Published On - 3:07 pm, Sat, 5 September 20