ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಆರೋಪ ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಸದ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ.
ಹೀಗಾಗಿ ಮಧ್ಯರಾತ್ರಿ 1 ಗಂಟೆಗೆ ರಾಗಿಣಿ ಪೋಷಕರು ತಮ್ಮ ಮಗಳನ್ನು ಕಾಣಲು ಮಹಿಳಾ ಸಾಂತ್ವನ ಕೇಂದ್ರದ ಗೇಟ್ ಬಳಿ ಕಾದು ಕುಳಿತ್ತಿದ್ದರು. ನಟಿ ರಾಗಿಣಿ ದ್ವಿವೇದಿ ತಾಯಿ ರೋಹಿಣಿ ದ್ವಿವೇದಿ, ತಂದೆ ರಾಕೇಶ್ ದ್ವಿವೇದಿ ತಮ್ಮ ಮಗಳಿಗಾಗಿ ಬಟ್ಟೆಯ ಜೊತೆಗೆ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ತಂದಿದ್ದರು.
ರಾಗಿಣಿ ಪೋಷಕರ ಬಳಿ ಇದಕ್ಕೆಲ್ಲಾ ಅನುಮತಿ ಇಲ್ಲದಿರುವುದರಿಂದ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಇದಕ್ಕೆಲ್ಲಾ ಅವಕಾಶ ನೀಡಲಿಲ್ಲ. ಮಹಿಳಾ ಸಾಂತ್ವಾನ ಕೇಂದ್ರದ ಗೇಟ್ ಮುಂಬಾಗ ಅರ್ಧ ಗಂಟೆ ಕಾದು ನಿಂತಿದ್ದ ರಾಗಿಣಿ ಪೋಷಕರು, ಕೊನೆಗೆ ತಂದಿದ್ದ ಊಟ ಮತ್ತು ಬಟ್ಟೆಯನ್ನು ತೆಗೆದುಕೊಂಡು ಮನೆಗೆ ವಾಪಾಸ್ಸಾಗಿದ್ದಾರೆ.
ಇದನ್ನೂ ಓದಿ: CCB ಬಂಧನದಲ್ಲಿ ನಟಿ ರಾಗಿಣಿ: ಹೇಗಿತ್ತು ಮೊದಲ ರಾತ್ರಿ?