ಪಾರ್ಕ್ನಲ್ಲಿ ಅಸಭ್ಯ ವರ್ತನೆ.. ನಟಿ ಸಂಯುಕ್ತ ಹೆಗ್ಡೆ ಮತ್ತೊಂದು ಕಿರಿಕ್
ಬೆಂಗಳೂರು: ಕಿರಿಕ್ ಪಾರ್ಟಿ ಖ್ಯಾತಿಯ ಬೆಡಗಿ ಸಂಯುಕ್ತಾ ಹೆಗ್ಡೆ ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಗರ ಉದ್ಯಾನವನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಂಯುಕ್ತ ಹೆಗ್ಡೆ ಮತ್ತು ಅವರ ಸ್ನೇಹಿತರು ಪಾರ್ಕ್ನಲ್ಲಿ ಹುಲಾ ಹೂಪ್ ಡಾನ್ಸ್ ಮಾಡ್ತಿದ್ದರಂತೆ. ಈ ವೇಳೆ ಸ್ಪೋರ್ಟ್ಸ್ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ್ದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಸಂಯುಕ್ತರಿಗೆ ತುಂಡು ಬಟ್ಟೆ ಹಾಕಿಕೊಂಡು ಸಾರ್ವಜನಿಕವಾಗಿ ಡ್ಯಾನ್ಸ್ ಮಾಡಬೇಡಿ ಎಂದು ಸ್ಥಳೀಯರು ಗುಡುಗಿದ್ದಾರೆ. ಜೊತೆಗೆ, ಪೊಲೀಸರಿಗೆ ದೂರು ಸಹ ನೀಡಿದರಂತೆ. […]
ಬೆಂಗಳೂರು: ಕಿರಿಕ್ ಪಾರ್ಟಿ ಖ್ಯಾತಿಯ ಬೆಡಗಿ ಸಂಯುಕ್ತಾ ಹೆಗ್ಡೆ ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಗರ ಉದ್ಯಾನವನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಂಯುಕ್ತ ಹೆಗ್ಡೆ ಮತ್ತು ಅವರ ಸ್ನೇಹಿತರು ಪಾರ್ಕ್ನಲ್ಲಿ ಹುಲಾ ಹೂಪ್ ಡಾನ್ಸ್ ಮಾಡ್ತಿದ್ದರಂತೆ. ಈ ವೇಳೆ ಸ್ಪೋರ್ಟ್ಸ್ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ್ದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಸಂಯುಕ್ತರಿಗೆ ತುಂಡು ಬಟ್ಟೆ ಹಾಕಿಕೊಂಡು ಸಾರ್ವಜನಿಕವಾಗಿ ಡ್ಯಾನ್ಸ್ ಮಾಡಬೇಡಿ ಎಂದು ಸ್ಥಳೀಯರು ಗುಡುಗಿದ್ದಾರೆ. ಜೊತೆಗೆ, ಪೊಲೀಸರಿಗೆ ದೂರು ಸಹ ನೀಡಿದರಂತೆ.
ದೂರಿನ ಮೇಲೆ ಸ್ಥಳಕ್ಕಾಗಮಿಸಿದ ಪೊಲೀಸರನ್ನ ಕಂಡ ತಕ್ಷಣ ಸಂಯುಕ್ತ ಹೆಗ್ಡೆ ಇನ್ಸ್ಟಾಗ್ರಾಮ್ ಲೈವ್ ಆರಂಭಿಸಿದ್ದು ಪೊಲೀಸರೊಟ್ಟಿಗೆ ವಾಗ್ವಾದಕ್ಕೆ ಇಳಿದಿರುವುದನ್ನು ಲೈವ್ ಮಾಡಿದ್ದಾರೆ. ನಟಿಯ ಕಿರುಚಾಟ ಕಂಡು ಪಾರ್ಕ್ ಬಳಿ ನೂರಾರು ಮಂದಿ ಜಮಾಯಿಸಿದರು ಎಂದು ತಿಳಿದುಬಂದಿದೆ.
https://www.instagram.com/tv/CEtwP4plMhN/?hl=en
Published On - 7:08 pm, Fri, 4 September 20