Viral Video: 10 ಅಡಿ ಎತ್ತರದ ಮನೆಯ ಗೋಡೆ ಮೇಲೆ ಜಿಗಿದು ಕೋಳಿಯನ್ನು ಬೇಟೆಯಾಡಿದ ಚಿರತೆ, ಸಿಸಿಟಿವಿಯಲ್ಲಿ ಸೆರೆ

|

Updated on: May 31, 2024 | 1:10 PM

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸುಮಾರು ಹತ್ತು ಅಡಿ ಎತ್ತರದ ಮನೆಯ ಗೋಡೆಯ ಮೇಲೆ ಕೋಳಿ ಕುಳಿತಿದ್ದ ಕೋಳಿಯನ್ನು ಹಿಡಿಯಲು ಚಿರತೆ ಹಾರಿರುವುದು ಮನೆಯ ಮುಂದಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Viral Video: 10 ಅಡಿ ಎತ್ತರದ ಮನೆಯ ಗೋಡೆ ಮೇಲೆ ಜಿಗಿದು ಕೋಳಿಯನ್ನು ಬೇಟೆಯಾಡಿದ ಚಿರತೆ, ಸಿಸಿಟಿವಿಯಲ್ಲಿ ಸೆರೆ
Follow us on

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿದ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್​ ಆಗುತ್ತಿದೆ. ಕೊಯಮತ್ತೂರಿನ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಅರಣ್ಯ ಇಲಾಖೆಗೆ ಸೂಚಿಸಿದ್ದು, ಈ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಕೊಯಮತ್ತೂರಿನ ಸೋಮಯನೂರು ಗ್ರಾಮದಲ್ಲಿ ಬುಧವಾರ (ಮೇ 29) ಮುಂಜಾನೆ 5 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ವರದಿಗಳಿವೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸುಮಾರು ಹತ್ತು ಅಡಿ ಎತ್ತರದ ಮನೆಯ ಗೋಡೆಯ ಮೇಲೆ ಕೋಳಿ ಕುಳಿತಿದ್ದ ಕೋಳಿಯನ್ನು ಹಿಡಿಯಲು ಚಿರತೆ ಹಾರಿರುವುದು ಮನೆಯ ಮುಂದಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಚಿರತೆ ನಿಧಾನವಾಗಿ ಬಂದು ಎತ್ತರದ ಗೋಡೆಯ ಮೇಲೆ ಕೂತಿರುವ ಕೋಳಿಯ ಮೇಲೆ ಎರಗಿದೆ. ಆದರೆ, ಕೋಳಿ ಇನ್ನೊಂದು ಬದಿಗೆ ಹಾರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದ್ದು, ಆದರೆ ಚಿರತೆ ಕೋಳಿ ಹಿಡಿದು ಬಾಯಲ್ಲಿಟ್ಟುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಘಟನೆಯಿಂದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದ ನಂತರ ಸ್ಥಳೀಯರು ಭಯಭೀತರಾಗಿದ್ದಾರೆ.

ಇದನ್ನೂ ಓದಿ: ಮದ್ಯವಿದ್ದ ವಾಹನ ಪಲ್ಟಿ, ಗಾಯಗೊಂಡ ಚಾಲಕನ ಸಹಾಯಕ್ಕೆ ಬಾರದೇ ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಜನ 

ಇತ್ತೀಚೆಗಷ್ಟೇ ಜನವಸತಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಿಂದ ಬೆಳಕಿಗೆ ಬಂದಿದ್ದು, ಬುಧವಾರ (ಮೇ 29) ಮುಂಜಾನೆ ಮಲವಿಸರ್ಜನೆಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ದಾಳಿಯಲ್ಲಿ ವ್ಯಕ್ತಿಗರ ಗಂಭೀರವಾದ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ