Video Viral: ನ್ಯೂಸ್ ಲೈವ್ ನಲ್ಲಿ ಆ್ಯಂಕರ್ ಬಾಯಿಯೊಳಕ್ಕೆ ಹೋದ ನೊಣ
ಸುದ್ದಿ ಓದುತ್ತಿರುವ ವೇಳೆ ನೊಣವೊಂದು ಆಕೆಯ ರೆಪ್ಪೆಗಳಿಂದ ಬಿದ್ದು ನೇರವಾಗಿ ಬಾಯಿಯೊಳಗೆ ನುಗ್ಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನೊಣವನ್ನು ನುಂಗುತ್ತಿರುವುದನ್ನು ತೋರಿಸಲಾಗಿದೆ ಮತ್ತು ಏನೂ ಆಗಿಲ್ಲ ಎಂಬಂತೆ ಲೈವ್ ಶೋ ಮುಂದುವರಿಸುತ್ತಿರುವುದನ್ನು ಕಾಣಬಹುದು.
ಟಿವಿ ನ್ಯೂಸ್ ಚಾನೆಲ್‌ನ ಮಹಿಳಾ ನಿರೂಪಕಿಯೊಂದಿಗಿನ ಲೈವ್ ಶೋನಲ್ಲಿ ಬಹಳ ತಮಾಷೆಯ ಘಟನೆ ನಡೆದಿದೆ. ಆಂಕರ್ ಸುದ್ದಿ ಓದುತ್ತಿರುವಾಗ ಆಕೆಯ ಬಾಯಿಗೆ ನೊಣ ನುಗ್ಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಆ್ಯಂಕರ್ ಸುದ್ದಿ ನಿಲ್ಲಿಸುವ ಬದಲು ನೊಣವನ್ನು ನುಂಗಿ ಫುಲ್ ಫ್ಲೋ ಆಗಿ ಸುದ್ದಿ ಓದುತ್ತಲೇ ಹೋಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕ್ಯಾಮರಾ ಇರುವುದರಿಂದ ಆತಂಕ ಉಂಟಾದರೂ ತೋರ್ಪಡಿಸಿಕೊಳ್ಳಲಾಗದಂತಹ ಸ್ಥಿತಿಯಲ್ಲಿರುವ ಆ್ಯಂಕರ್ ಅನ್ನು ಇಲ್ಲಿ ವಿಡಿಯೋದಲ್ಲಿ ಕಾಣಬಹುದು.
ಸ್ಕೈನ್ಯೂಸ್ ಪ್ರಕಾರ, ಬೋಸ್ಟನ್ 25 ನ್ಯೂಸ್ ಆ್ಯಂಕರ್ ವನೆಸ್ಸಾ ವೆಲ್ಚ್ ಎಂಬವರು ಆಕಸ್ಮಿಕವಾಗಿ ನೊಣ ನುಂಗಿದ್ದಾರೆ. ಸುದ್ದಿ ಓದುತ್ತಿರುವ ವೇಳೆ ನೊಣವೊಂದು ಆಕೆಯ ರೆಪ್ಪೆಗಳಿಂದ ಬಿದ್ದು ನೇರವಾಗಿ ಬಾಯಿಯೊಳಗೆ ನುಗ್ಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನೊಣವನ್ನು ನುಂಗುತ್ತಿರುವುದನ್ನು ತೋರಿಸಲಾಗಿದೆ ಮತ್ತು ಏನೂ ಆಗಿಲ್ಲ ಎಂಬಂತೆ ಲೈವ್ ಶೋ ಮುಂದುವರಿಸುತ್ತಿರುವುದನ್ನು ಕಾಣಬಹುದು.
On Boston25, the news anchor demonstrated true journalistic professionalism: she swallowed a fly and continued to broadcast asnothing had happened. pic.twitter.com/v9Chc1R8QI
— NEXTA (@nexta_tv) May 28, 2024
ಇದನ್ನೂ ಓದಿ: ಮದ್ಯವಿದ್ದ ವಾಹನ ಪಲ್ಟಿ, ಗಾಯಗೊಂಡ ಚಾಲಕನ ಸಹಾಯಕ್ಕೆ ಬಾರದೇ ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಜನ
@nexta_tv ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮೇ 29ರಂದು ಹಂಚಿಕೊಳ್ಳಲಾಗಿರುವ ವಿಡಿಯೋ ಇದೀಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದೇ ರೀತಿಯ ಘಟನೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದಿತ್ತು. ಪಾಕಿಸ್ತಾನದ ಪ್ರವಾಹದ ಕುರಿತು ಸುದ್ದಿ ನಿರೂಪಕಿ ಫರ್ರಾ ನಾಸರ್ ಟಿವಿಯಲ್ಲಿ ಲೈವ್ ಕೊಡುತ್ತಿದ್ದಾಗಲೇ ನೊಣವನ್ನು ನುಂಗಿದ್ದು, ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ