AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಷ್ತಾಕ್ ಅಲಿ ಟ್ರೋಫಿ ನಡೆದ ಕೇಂದ್ರಗಳಲ್ಲೇ ವಿಜಯ ಹಜಾರೆ ಟ್ರೋಫಿಗಾಗಿ ಪಂದ್ಯಗಳು: ಬಿಸಿಸಿಐ

ಮುಷ್ತಾಕ್ ಅಲಿ ಟ್ರೋಫಿಯನ್ನು ಆಯೋಜಿಸಿದ ಕೇಂದ್ರಗಳ ವ್ಯವಸ್ಥಾಪಕರಿಗೆ ಕೊವಿಡ್-19 ಸಂಬಂಧಿಸಿದ ಶಿಷ್ಟಾಚಾರಗಳು ಚೆನ್ನಾಗಿ ಗೊತ್ತಿರುವುದರಿಂದ ಅಲ್ಲೇ ವಿಜಯ ಹಜಾರೆ ಟ್ರೋಫಿಗಾಗಿ ನಡೆಯುವ ಪಂದ್ಯಗಳನ್ನು ಸಹ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ಮುಷ್ತಾಕ್ ಅಲಿ ಟ್ರೋಫಿ ನಡೆದ ಕೇಂದ್ರಗಳಲ್ಲೇ ವಿಜಯ ಹಜಾರೆ ಟ್ರೋಫಿಗಾಗಿ ಪಂದ್ಯಗಳು: ಬಿಸಿಸಿಐ
ವಿಜಯ ಹಜಾರೆ ಟ್ರೋಫಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 02, 2021 | 9:32 PM

ಇಂಡಿಯನ್ ಪ್ರಿಮೀಯರ್ ಲೀಗ್​ನಂಥ (ಐಪಿಎಲ್) ಶ್ರೀಮಂತ ಮತ್ತು ಅತ್ಯಂತ ಲಾಭದಾಯಕ ಟೂರ್ನಿಯನ್ನು ಅಯೋಜಿಸಲು ಕಳೆದ 87 ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯನ್ನು ಬಲಿ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದೆರಡು ನೆಪಗಳನ್ನೊಡ್ಡಿ ಕೇವಲ 50 ಓವರ್​ಗಳ ವಿಜಯ್ ಹಜಾರೆ ಟ್ರೋಫಿಗಾಗಿ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಿದೆ.

ಶನಿವಾರದಂದು ಎಲ್ಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದು ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿ ರದ್ದು ಮಾಡಿರುವ ಬಗ್ಗೆ ತಿಳಿಸಿರುವ ಬಿಸಿಸಿಐ ಸಮಯಾವಕಾಶದ ಕೊರತೆ ಮತ್ತು ಕೊವಿಡ್-19ಪಿಡುಗಿನ ಭೀತಿ ಇನ್ನೂ ದೂರವಾಗಿರದ ಕಾರಣ ಕೇವಲ ವಿಜಯ ಹಜಾರೆ ಟ್ರೋಫಿ ಮಾತ್ರ ಆಯೋಜಿಸಲಾಗುವುದೆಂದು ಹೇಳಿದೆ. ಬಿಸಿಸಿಐ ನೀಡಿರುವ ಸ್ಪಷ್ಟನೆಯೇನೆಂದರೆ ರಣಜಿ ಟ್ರೋಫಿ ಆಯೋಜಿಸಲು 70 ದಿನಗಳ ಬೇಕಾಗುತ್ತದೆ ಆದರೆ ವಿಜಯ್ ಹಜಾರೆ ಟ್ರೋಫಿಯನ್ನು ಕೇವಲ 34 ದಿನಳಲ್ಲಿ ಮುಗಿಸಿ ಬಿಡಬಹುದು ಮತ್ತು ಏಪ್ರಿಲ್​ನಲ್ಲಿ ಶುರುವಾಗುವ ಐಪಿಎಲ್ ಟೂರ್ನಿಗೆ ಅದರಿಂದ ಅಡಚಣೆಯಾಗದು.

ಬಿಸಿಸಿಐನ ಈ ನಡೆ ಆಶ್ಚರ್ಯ ಹುಟ್ಟಿಸುವುದಿಲ್ಲ. ಯಾಕೆಂದರೆ ಟೆಸ್ಟ್​ಗಳಿಗೆ ಟೀಮನ್ನು ಆಯ್ಕೆ ಮಾಡುವಾಗಲೂ ಅದು ಸೀಮಿತ ಓವರ್ ಪಂದ್ಯಗಳು ಇಲ್ಲವೇ ಐಪಿಎಲ್​ನಲ್ಲಿ ಆಟಗಾರರು ತೋರುವ ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಳ್ಳುತ್ತಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಬ್ಬನ ನಂತರ ಮತ್ತೊಬ್ಬನಂತೆ ಸಾಲುಸಾಲಾಗಿ ಟೀಮ್ ಇಂಡಿಯಾದ ಆಟಗಾರರು ಫಿಟ್ನೆಸ್ ಸಮಸ್ಯೆ ಮತ್ತು ಗಾಯಗಳಿಗೆ ತುತ್ತಾದರೂ ಬಿಸಿಸಿಐಗೆ ಜ್ಞಾನೋದಯವಾದಂತಿಲ್ಲ. ಸರಣಿ ಗೆದ್ದ ಸಂಭ್ರಮದಲ್ಲಿ ಈ ಮೂಲಭೂತ ಅಂಶವನ್ನು ಕಡಗಣಿಸಲಾಗಿದೆ. ಕೆಂಪು ಮತ್ತು ಬಿಳಿ ಚೆಂಡಿನ ಆಟಗಳ ಮಧ್ಯೆ ವ್ಯತ್ಯಾಸವಿರೋದು ಮಂಡಳಿಗೂ ಗೊತ್ತಿದೆ. ಆದರೆ ಐಪಿಎಲ್ ಬಿಸಿಸಿಐ ಖಜಾನೆಯನ್ನು ತುಂಬಿಸಿದರೆ, ರಣಜಿ ಟ್ರೋಫಿ ಪಂದ್ಯಗಳನ್ನು ನೋಡಲು ಆಟಗಾರರ ಕುಟಂಬದ ಸದಸ್ಯರು ಸಹ ಹೋಗುವುದಿಲ್ಲ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ

ಫೆಬ್ರವರಿ 18ರಿಂದ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿ ಟೂರ್ನಿಯ ಬಗ್ಗೆ ಸ್ವಲ್ಪ ಗಮನ ಹರಿಸುವ. ಈ ಟ್ರೋಫಿಗಾಗಿ ನಡೆಯುವ ಪಂದ್ಯಗಳನ್ನೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಆಯೋಜಿಸಿದ ಕೇಂದ್ರಗಳಲ್ಲೇ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಅಂದರೆ ಲೀಗ್ ಹಂತದ ಪಂದ್ಯಗಳು ಮುಂಬೈ, ಕೊಲ್ಕತಾ, ಇಂದೋರ್, ಬೆಂಗಳೂರು ಮತ್ತು ಬರೋಡದಲ್ಲಿ ನಡೆಯಲಿವೆ. ನಾಕ್ಔಟ್ ಹಂತದ ಪಂದ್ಯಗಳು ಮಾತ್ರ ಬೇರೆ ಕೇಂದ್ರಗಳಲ್ಲಿ ನಡೆಯಲಿವೆ. ಬಿಸಿಸಿಐ ಮೂಲಗಳ ಪ್ರಕಾರ, ಲೀಗ್ ಹಂತದ ಪಂದ್ಯಗಳನ್ನು ಅಯೋಜಿಸಲು ಕೇರಳದ ಒಂದು ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಮುಷ್ತಾಕ್ ಅಲಿ ಟ್ರೋಫಿಯನ್ನು ಆಯೋಜಿಸಿದ ಕೇಂದ್ರಗಳ ವ್ಯವಸ್ಥಾಪಕರಿಗೆ ಕೊವಿಡ್-19 ಸಂಬಂಧಿಸಿದ ಶಿಷ್ಟಾಚಾರಗಳು ಚೆನ್ನಾಗಿ ಗೊತ್ತಿರುವುದರಿಂದ ಅಲ್ಲೇ ವಿಜಯ ಹಜಾರೆ ಟ್ರೋಫಿಗಾಗಿ ನಡೆಯುವ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಆದರೆ, ಮುಷ್ತಾಕ್ ಅಲಿ ಟ್ರೋಫಿಯ ಪ್ಲೇಟ್ ಡಿವಿಜನ್ ಲೀಗ್ ಪಂದ್ಯಗಳನ್ನು ಆಯೋಜಿಸಿದ ಚೆನೈಯಲ್ಲಿ ವಿಜಯ ಹಜಾರೆ ಟ್ರೋಫಿಗಾಗಿ ನಡೆಯುವ ಯಾವುದೇ ಪಂದ್ಯವನ್ನು ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡೂ ಟೆಸ್ಟ್​ಗಳು ಚೆನೈಯಲ್ಲೇ ನಡೆಯಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆಯೆಂದು ಮಂಡಳಿ ಮೂಲಗಳು ತಿಳಿಸಿವೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ ಮುಷ್ತಾಕ್ ಅಲಿ ಟ್ರೋಫಿ ಸ್ವೀಕರಿಸುತ್ತಿರುವ ಟಿಎನ್​ಸಿಎ ನಾಯಕ ದಿನೇಶ್ ಕಾರ್ತೀಕ್

ಹಾಗೆಯೇ, ಮಹಿಳೆಯರ ಒಂದು ದಿನದ ಪಂದ್ಯಗಳ ಟೂರ್ನಿಯನ್ನು ವಿಜಯವಾಡ, ಹೈದರಾಬಾದ್ ಮತ್ತು ಪುಣೆಯಲ್ಲಿ ನಡೆಸಲು ಆಲೋಚಿಸಲಾಗುತ್ತಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ರೈತರ ಚಳುವಳಿ ಜಾರಿಯಲ್ಲಿರುವ ದೆಹಲಿ ಮತ್ತು ಚಂಡೀಗಢ್​ನಲ್ಲಿ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂಬ ನಿರ್ಣಯಕ್ಕೂ ಮಂಡಳಿ ಬಂದಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಎರಡು ಟೆಸ್ಟ್ ಸೇರಿದಂತೆ ಹಲವಾರು ಸೀಮಿತ ಓವರ್​ಗಳ ಪಂದ್ಯಗಳು ಸಹ ಒಂದು ತಿಂಗಳ ಅವಧಿಯವರೆಗೆ (ಫೆಬ್ರುವರಿ 18ರಿಂದ ಮಾರ್ಚ್ 18) ಅಹಮದಾಬಾದ್​ನಲ್ಲಿ ನಡೆಯಲಿರುವುದರಿಂದ ಅದನ್ನೂ ವಿಜಯ ಹಜಾರೆ ಟ್ರೋಫಿ ಪಂದ್ಯಗಳಿಗೆ ಪರಿಗಣಿಸಲಾಗಿಲ್ಲ.

ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ 38 ತಂಡಗಳು ವಿಜಯ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲೂ ಆಡಲಿವೆ.

ಪಂದ್ಯ ಆಯೋಜನೆಗೊಳ್ಳುವ ಕೇಂದ್ರಗಳನ್ನು ಅಪೊಲ್ಲೊ ಗುಂಪಿನ ಅಸ್ಪತ್ರೆಗಳು ಮಾಡುವ ಶಿಫಾರಸ್ಸಿನ ಮೇಲೆ ಆಯ್ದುಕೊಳ್ಳಲಾಗಿದೆ. ಭಾರತದಲ್ಲಿ ನಡೆಯುವ ದೇಶೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಬಯೊ-ಬಬಲ್ ಗಳನ್ನು ಸೃಷ್ಟಿಸುವ ಮತ್ತು ಆಟಗಾರರ ಕೊವಿಡ್-19 ಟೆಸ್ಟ್ ಮಾಡುವ ಹೊಣೆಗಾರಿಕೆಯನ್ನು ಈ ಗುಂಪಿಗೆ ವಹಿಸಿಕೊಡಲಾಗಿದೆ.

ಅಂದಹಾಗೆ, ಬಿಸಿಸಿಐ ಆಯ್ಕೆ ಮಾಡಿಕೊಂಡಿರುವ ಕೆಲವು ಕೇಂದ್ರಗಳಲ್ಲಿ ಹಗಲು-ರಾತ್ರಿ ಪಂದ್ಯಗಳನ್ನು ಆಯೋಜಿಸುವ ಸೌಲಭ್ಯವಿದ್ದರೂ ಎಲ್ಲ ಪಂದ್ಯಗಳನ್ನು ಹಗಲಿನಲ್ಲೇ ನಡೆಸಲು ಮಂಡಳಿ ನಿರ್ಧರಿಸಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ.. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜೈ ಶಾ ಅವಿರೋಧ ಆಯ್ಕೆ

Published On - 5:54 pm, Tue, 2 February 21

ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ