ಕೆರೆಯ ಮಣ್ಣನ್ನೂ ಬಿಡದ BJP ಶಾಸಕ ಮಹಾಶಯ! ಕೆರೆಯ ಕಣ್ಣೀರ ಕಥೆ ಕೇಳೊರು ಯಾರು?
ಗದಗ: ಅದು ಸಣ್ಣ ನೀರಾವರಿ ಇಲಾಖೆಯ ಬೃಹತ್ ಕೆರೆ. ಆದ್ರೆ ಆ ಶಾಸಕ ಮಹಾಶಯ ಅಭಿವೃದ್ಧಿ ಮಾಡೋದು ಬಿಟ್ಟು ಸರ್ಕಾರಿ ಕೆರೆಯ ಮಣ್ಣನ್ನು ಅಕ್ರಮ ಲೂಟಿ ಮಾಡಿ ತಮ್ಮ ಸ್ವಂತ ಜಮೀನು ಅಭಿವೃದ್ಧಿ ಮಾಡಿದ್ದಾರೆ. ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಸರ್ಕಾರಿ ಕೆರೆ ಲೂಟಿ ಮಾಡಿದ್ರೂ ಜಿಲ್ಲಾಡಳಿತ, ಸಣ್ಣ ನೀರಾವರಿ, ಗಣಿ ಇಲಾಖೆ ಡೋಂಟ್ ಕೇರ್ ಅಂತಿದ್ದಾರೆ. ಸಾರ್ವಜನಿಕರು ಎಲ್ಲ ಅಧಿಕಾರಿಗಳಿಗೆ ಕೆರೆ ಉಳಿಸಿ ಅಂತ ಮನವಿ ಮಾಡಿದ್ರೂ ಅಕ್ರಮ ತಡಿಯೋ ಗೋಜಿಗೆ ಹೋಗಿಲ್ಲ. […]

ಗದಗ: ಅದು ಸಣ್ಣ ನೀರಾವರಿ ಇಲಾಖೆಯ ಬೃಹತ್ ಕೆರೆ. ಆದ್ರೆ ಆ ಶಾಸಕ ಮಹಾಶಯ ಅಭಿವೃದ್ಧಿ ಮಾಡೋದು ಬಿಟ್ಟು ಸರ್ಕಾರಿ ಕೆರೆಯ ಮಣ್ಣನ್ನು ಅಕ್ರಮ ಲೂಟಿ ಮಾಡಿ ತಮ್ಮ ಸ್ವಂತ ಜಮೀನು ಅಭಿವೃದ್ಧಿ ಮಾಡಿದ್ದಾರೆ. ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಸರ್ಕಾರಿ ಕೆರೆ ಲೂಟಿ ಮಾಡಿದ್ರೂ ಜಿಲ್ಲಾಡಳಿತ, ಸಣ್ಣ ನೀರಾವರಿ, ಗಣಿ ಇಲಾಖೆ ಡೋಂಟ್ ಕೇರ್ ಅಂತಿದ್ದಾರೆ. ಸಾರ್ವಜನಿಕರು ಎಲ್ಲ ಅಧಿಕಾರಿಗಳಿಗೆ ಕೆರೆ ಉಳಿಸಿ ಅಂತ ಮನವಿ ಮಾಡಿದ್ರೂ ಅಕ್ರಮ ತಡಿಯೋ ಗೋಜಿಗೆ ಹೋಗಿಲ್ಲ. ಅಕ್ರಮ ಮಣ್ಣು ಲೂಟಿ ಮಾಡೋ ಶಾಸಕರ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಭಯ ಪಡ್ತಾಯಿದೆಯಾ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಶಾಸಕರೇ ಸರ್ಕಾರಿ ಕೆರೆಯ ಮಣ್ಣು ಅಕ್ರಮ ಲೂಟಿ ಮಾಡಿದ್ದಾರಂತೆ.
ಸರ್ಕಾರಿ ಕೆರೆಗಳ ಅಕ್ರಮ ಮಣ್ಣು ಲೂಟಿ ಭರ್ಜರಿಯಾಗಿ ನಡೀತಾಯಿದೆ. ಅಷ್ಟಕ್ಕೂ ಈ ಅಕ್ರಮ ಮಣ್ಣು ಲೂಟಿ ಮಾಡ್ತಾಯಿರೋರು ಯಾರೂ ಅಂತ ಗೋತ್ತಾದ್ರೆ ನೀವು ಬೆಚ್ಚಿಬಿಳ್ತೀರಿ. ಹೌದು ಅಕ್ರಮ ತಡೆಯಬೇಕಾದ ಶಾಸಕರೇ ಸರ್ಕಾರಿ ಕೆರೆಯ ಮಣ್ಣು ಅಕ್ರಮ ಲೂಟಿ ಮಾಡಿದ್ದಾರಂತೆ. ಹಗಲು ರಾತ್ರಿ ಸಾವಿರಾರು ಟಿಪ್ಪರ್ ಮಣ್ಣು ಸಾಗಿಸಿದ್ದಾರೆ.
ಹೀಗಾಗಿ ಸರ್ಕಾರಿ ಕೆರೆಯಲ್ಲಿ ಬೃಹತ್ ಆಕಾರದ ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿ ಲೂಟಿಯಾದ ಮಣ್ಣನ್ನು ಶಾಸಕರು ತಮ್ಮ ಜಮೀನಿಗೆ ಹಾಕಿಕೊಂಡು ಅಭಿವೃದ್ಧಿ ನಡೆಸಿದ್ದಾರೆ. ಹೌದು ಈ ಅಕ್ರಮ ದಂಧೆ ನಡೆದಿದ್ದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೊರವಲಯದ ಕೆರೆಯಲ್ಲಿ.
ರೋಣ ಬಿಜೆಪಿ ಶಾಸಕ ಕಳಕಪ್ಪ ಬಂಡಿ ವಿರುದ್ಧ ಸರ್ಕಾರಿ ಕೆರೆ ಮಣ್ಣು ಲೂಟಿ ಮಾಡಿರುವುದಾಗಿ ಗಂಭೀರವಾದ ಆರೋಪ ಕೇಳಿ ಬಂದಿದೆ. ಇಲ್ಲಿ ಅಪಾರ ಮಣ್ಣು ಲೂಟಿ ಮಾಡಿ ಶಾಸಕರ ಉದ್ದೇಶಿತ ಕೈಗಾರಿಕಾ ಜಮೀನಿಗೆ ಹಾಕಿಕೊಂಡಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಶಾಸಕರ ಅಕ್ರಮ ತಡೆಯಲು ಜಿಲ್ಲಾಡಳಿತಕ್ಕೆ ಭಯಾ..
ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ ಬಗಿಯುತ್ತಿದ್ರೂ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ. ಶಾಸಕರ ಅಕ್ರಮ ತಡೆಯಲು ಜಿಲ್ಲಾಡಳಿತಕ್ಕೆ ಭಯಾನಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಗಜೇಂದ್ರಗಡ ಪಟ್ಟಣದ 3 ಕಿಲೋಮೀಟರ್ ದೂರದಲ್ಲಿರೋ ಶಾಸಕರ ಸುಮಾರು 16 ಎಕರೆಯ ಜಮೀನನ್ನು ಕೆರೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ.
ಈ ಮೂಲಕ ಶಾಸಕರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರಿ ಕೆರೆ ಮಣ್ಣಿನಲ್ಲಿ ಸ್ವಂತ ಜಮೀನು ಅಭಿವೃದ್ಧಿ ಮಾಡಿಕೊಂಡಿದ್ದಾರೆ ಅಂತ ಜನ ಕಿಡಿಕಾರಿದ್ದಾರೆ. ಶಾಸಕನ ಅಟ್ಟಹಾಸಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಆರೋಪದ ಬಗ್ಗೆ ಶಾಸಕ ಕಳಕಪ್ಪ ಬಂಡಿ ಅವ್ರನ್ನು ಟಿವಿ9 ಎರಡ್ಮೂರು ಬಾರಿ ಸಂಪರ್ಕ ಮಾಡಿದ್ರೆ ಶಾಸಕರ ಮೊಬೈಲ್ ಸ್ವೀಚ್ ಆಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಹಿಟಾಚಿ, ಜೆಸಿಬಿಗಳ ಮೂಲಕ ಅಂದಾಜು 50 ಲಕ್ಷಕ್ಕೂ ಅಧಿಕ ರೂಪಾಯಿ ಕೆರೆಯ ಮಣ್ಣನ್ನು ಅಗೆದು ಟಿಪ್ಪರ್ ಮೂಲಕ ರಾಜಾರೋಷವಾಗಿ ಲೂಟಿ ನಡೆದಿದೆ. ಇನ್ನಾದ್ರೂ ಜಿಲ್ಲಾಡಳಿತ ಸರ್ಕಾರಿ ಕೆರೆ ಲೂಟಿ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.
-ಸಂಜೀವ ಪಾಂಡ್ರೆ

Published On - 12:44 pm, Mon, 9 November 20




