ವಿಚಾರಣೆಗೆಂದು ಕರೆಸಿ, ಗ್ರಾಮಸ್ಥರ ಮೇಲೆ ಭೀಕರ ಹಲ್ಲೆ: ಗಾಯಾಳುಗಳು ಆಸ್ಪತ್ರೆಗೆ

ಚಾಮರಾಜನಗರ: ಪ್ರಕರಣವೊಂದರ ವಿಚಾರಣೆಗೆಂದು ಗ್ರಾಮಸ್ಥರನ್ನು ಕರೆದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಹೊಂಗಲವಾಡಿ ಗ್ರಾಮದ ಉಮೇಶ್ ಹಾಗೂ ಮಹದೇವಪ್ಪ ಎಂಬುವವರ ಮೇಲೆ ಕೆ.ಗುಡಿ ಅರಣ್ಯ ವಲಯದ RFO ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಳಿಗಿರಿರಂಗನ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಅರಣ್ಯ ವಲಯದ ಅಧಿಕಾರಿ ಶಾಂತಪ್ಪ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ವಿರುದ್ಧ ಆರೋಪ ಕೇಳಿಬಂದಿದೆ. ಸದ್ಯ, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ, ಅಧಿಕಾರಿಗಳ […]

ವಿಚಾರಣೆಗೆಂದು ಕರೆಸಿ, ಗ್ರಾಮಸ್ಥರ ಮೇಲೆ ಭೀಕರ ಹಲ್ಲೆ: ಗಾಯಾಳುಗಳು ಆಸ್ಪತ್ರೆಗೆ
Edited By:

Updated on: Nov 05, 2020 | 11:11 AM

ಚಾಮರಾಜನಗರ: ಪ್ರಕರಣವೊಂದರ ವಿಚಾರಣೆಗೆಂದು ಗ್ರಾಮಸ್ಥರನ್ನು ಕರೆದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಹೊಂಗಲವಾಡಿ ಗ್ರಾಮದ ಉಮೇಶ್ ಹಾಗೂ ಮಹದೇವಪ್ಪ ಎಂಬುವವರ ಮೇಲೆ ಕೆ.ಗುಡಿ ಅರಣ್ಯ ವಲಯದ RFO ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಳಿಗಿರಿರಂಗನ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಅರಣ್ಯ ವಲಯದ ಅಧಿಕಾರಿ ಶಾಂತಪ್ಪ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ವಿರುದ್ಧ ಆರೋಪ ಕೇಳಿಬಂದಿದೆ. ಸದ್ಯ, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.