ಪ್ರಧಾನಿಯಿಂದ ಪ್ರಶಂಸೆ ಪಡೆದ ಕಾಮೇಗೌಡ ಕ್ರಿಮಿನಲ್ ವ್ಯಕ್ತಿ: DCಗೆ ದೂರು ನೀಡಿದ ಗ್ರಾಮಸ್ಥರು
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಪಟ್ಪಿದ್ದ ಕೆರೆ ಕಾಮೇಗೌಡರ ವಿರುದ್ಧ ಅವರ ಗ್ರಾಮಸ್ಥರೇ ತಿರುಗಿ ಬಿದ್ದಿದ್ದಾರೆ. ಕಾಮೇಗೌಡ ಒಬ್ಬ ಡೋಂಗಿ ಪರಿಸರ ಪ್ರೇಮಿ. ಅವರಿಗೆ ನೀಡಿರುವ ಬಿರುದು, ಪ್ರಶಸ್ತಿ, ಸನ್ಮಾನಗಳನ್ನು ಮರು ಪರಿಶೀಲಿಸಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮಸ್ಥರು ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಹೌದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಪರಿಸರವಾದಿ ಎಂದು ಕಾಮೇಗೌಡ ಪ್ರಶಂಸೆ […]
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಪಟ್ಪಿದ್ದ ಕೆರೆ ಕಾಮೇಗೌಡರ ವಿರುದ್ಧ ಅವರ ಗ್ರಾಮಸ್ಥರೇ ತಿರುಗಿ ಬಿದ್ದಿದ್ದಾರೆ. ಕಾಮೇಗೌಡ ಒಬ್ಬ ಡೋಂಗಿ ಪರಿಸರ ಪ್ರೇಮಿ. ಅವರಿಗೆ ನೀಡಿರುವ ಬಿರುದು, ಪ್ರಶಸ್ತಿ, ಸನ್ಮಾನಗಳನ್ನು ಮರು ಪರಿಶೀಲಿಸಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮಸ್ಥರು ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಹೌದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಪರಿಸರವಾದಿ ಎಂದು ಕಾಮೇಗೌಡ ಪ್ರಶಂಸೆ ಗೊಳಪಟ್ಪಿದ್ದರು. ಆದ್ರೆ ಈಗ ಅವರದೇ ಗ್ರಾಮದ ಜನರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಮೇಗೌಡ ಕೆರೆ-ಕಟ್ಟೆಗಳನ್ನ ಕಟ್ಟಿಸಿದ್ದು, ಗಿಡಗಳನ್ನ ನೆಟ್ಟು ಪೋಷಿಸಿದ್ದೆಲ್ಲಾ ಸುಳ್ಳು. ಯಾರೋ ಕಟ್ಟಿದ ಕೆರೆ-ಕಟ್ಟೆಗಳನ್ನ ನಾನು ಕಟ್ಟಿದ್ದು ಅಂತಾರೆ. ಎರಡು ಸಾವಿರ ಗಿಡಗಳನ್ನ ನೆಟ್ಟಿರೋದೂ ಕೂಡಾ ಸುಳ್ಳು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಮೇಗೌಡ ಒಬ್ಬ ಅನಾಗರಿಕ ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕಾಮೇಗೌಡರ ವಿರುದ್ಧ ಕೇಸುಗಳಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಅವರು ಮರ್ಯಾದೆ ಕೊಡಲ್ಲ. ಅನಾಗರಿಕನಂತೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸ್ವತಃ ಅವರ ತಾಯಿ ತೀರಿಕೊಂಡಾಗಲೂ ಮೃತ ತಾಯಿಯ ಮುಖ ನೋಡಲೂ ಬಂದಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮೇಗೌಡ ಸರ್ಕಾರದ ಸಹಾಯದಿಂದ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ನಿತ್ಯ ಒಂದಲ್ಲ, ಒಂದು ಆರೋಪ ಮಾಡಿ ಮೇಲಾಧಿಕಾರಿಗೆ ದೂರು ಸಲ್ಲಿಸುತ್ತಾರೆ. ಈ ಸಂಬಂಧ ಸರ್ಕಾರದ ಅಧಿಕಾರಿಗಳೇ ಪರಿಶೀಲನೆ ಮಾಡಿ, ಇಡೀ ಗ್ರಾಮಸ್ಥರ ವೈಯಕ್ತಿಕ ಅಭಿಪ್ರಾಯ ಪಡೆದು ಅವರು ನಿಜವಾಗಿಯೂ ಸಮಾಜ ಸೇವಕನಾ ಎಂಬುದನ್ನ ಪರೀಕ್ಷಿಸಿ ಎಂದು ಮಂಡ್ಯ ಡಿಸಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
Published On - 1:34 pm, Wed, 15 July 20